ಕಡೂರು: ಏಳು ಜನ ಕಾಡುಹಂದಿ ಬೇಟೆಗಾರರ ಬಂಧನ…

734
firstsuddi

ಕಡೂರು :ತಾಲೂಕಿನ ಬುಕ್ಕಾಸಾಗರ ಕೆರೆ ಏರಿ ಮೇಲೆ ಕಾಡುಹಂದಿ ಮಾಂಸ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಏಳು ಜನ ಕಾಡುಹಂದಿ ಬೇಟೆಗಾರರನ್ನು ಬಂಧಿಸಿರುವ ಘಟನೆ ತಾಲೂಕಿನ ಬುಕ್ಕಾಸಾಗರ ಗ್ರಾಮದಲ್ಲಿ ನಡೆದಿದ್ದು, ರವಿ, ಪ್ರತಾಪ, ಜಯಣ್ಣ, ಮಾರಪ್ಪ, ಮಂಜುನಾಥ್,ಮಂಜಪ್ಪ, ನಂಜಪ್ಪ, ಎಂಬುವವರನ್ನು ಬಂಧಿಸಲಾಗಿದ್ದು, ಬಂಧಿತರು ದೊಡ್ಡಬುಕ್ಕಾಸಾಗರ ಹಾಗೂ ಶಿವಪುರ ಗ್ರಾಮದವರು ಎಂದು ತಿಳಿದು ಬಂದಿದ್ದು, ಬಂಧಿತರಿಂದ 50 ಕೆ.ಜಿ. ಹಂದಿ ಮಾಂಸ ಹಾಗೂ ಬೋಲೆರೋ ಪಿಕ್ ಹಪ್ ವಾಹನ, ಎರಡು ಬೈಕ್ ಗಳನ್ನೂ ವಶಕ್ಕೆ ಪಡೆದಿದ್ದಾರೆ. ಕಡೂರು ಅರಣ್ಯ ಇಲಾಖೆ ವಲಯದಲ್ಲಿ ಪ್ರಕರಣ ದಾಖಲಾಗಿದೆ.