ಹಾಸ್ಟೆಲ್ ನಲ್ಲೇ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ…

1097
firstsuddi

ಬೆಂಗಳೂರು: ಮಹಾರಾಣಿ ಕಾಲೇಜ್ ಹಾಸ್ಟೆಲ್‍ ನಲ್ಲಿ ಶೃತಿ(21) ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಡುಬಂದಿದ್ದು, ಶೃತಿ ಮೂಲತಃ ಕೋಲಾರದ ಶ್ರೀನಿವಾಸ್ ಪುರದವಳಾಗಿದ್ದು, ವಿದ್ಯಾರ್ಥಿನಿ ಕೆ.ಆರ್.ವೃತ್ತದ ಸಮೀಪವಿರುವ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ ವ್ಯಾಸಾಂಗ ಮಾಡುತ್ತಿದ್ದು,  ಸಾಲು ಹಬ್ಬಗಳು ಬಂದ ಹಿನ್ನೆಲೆಯಲ್ಲಿ ರಜೆಗಳು ಇದ್ದುದರಿಂದ ವಿದ್ಯಾರ್ಥಿನಿಯರು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಹಾಸ್ಟೆಲ್ ನಲ್ಲಿ ಯಾರು ಇಲ್ಲದ ವೇಳೆ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರ್ಡನ್ ಬಂದು ಕೊಠಡಿಯ ಬಾಗಿಲು ತಟ್ಟಿದ್ದು, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ,ಇದರಿಂದ ಅನುಮಾನಗೊಂಡ ವಾರ್ಡನ್ ಇತರ ಸಿಬ್ಬಂದಿಗಳನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.