ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಕುಮಾರಸ್ವಾಮಿಗೆ ಬಿಗ್ ರಿಲೀಫ್…

624

ಬೆಂಗಳೂರು: ಅರ್ಕಾವತಿ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಡಿ ನೋಟೀಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.ಲೋಕಾಯುಕ್ತ ಪೊಲೀಸರ ದೋಷಾರೋಪ ಪಟ್ಟಿ ಆಧಾರ ರಹಿತವೆಂಬ ವಾದ ಮಂಡಿಸಲಾಗಿತ್ತು. ನಂತರ ಎಚ್ ​ಡಿ ಕೆ ಪ್ರಕರಣ ರದ್ದು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ,  ಜ್ಯೋತಿ ರಾಮಲಿಂಗಂ, ಶ್ರೀರಾಮು ಮತ್ತು ರವಿ ಪ್ರಕಾಶ್ ಅವರನ್ನು ಖುಲಾಸೆಗೊಳಿಸಿ ನ್ಯಾಯಾಧೀಶ ಬಿ.ವಿ ಪಾಟೀಲ್ ಆದೇಶ ಹೊರಡಿಸಿದ್ದಾರೆ.ಮತ್ತೊಬ್ಬ ಆರೋಪಿಯಾದ ಚನ್ನಿಗಪ್ಪ ಅವರು ಅರ್ಜಿ ಸಲ್ಲಿಸದ ಕಾರಣ ಅವರ ಬಗ್ಗೆ ಯಾವುದೇ ಆದೇಶ ನ್ಯಾಯಾಲಯ ನೀಡಿಲ್ಲ.