ತುಮಕೂರು: ಗಣೇಶ ಉತ್ಸವದ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಸಿತಾರಾ (21) ಮೃತಪಟ್ಟ ಯುವತಿ. ಗಣೇಶ ಉತ್ಸವದ ಸಂಭ್ರಮದ ವೇಳೆ ಪಟಾಕಿಯನ್ನು ಸಿಡಿಸಲಾಗುತ್ತಿತ್ತು, ಈ ವೇಳೆ ಸಿತಾರಾ ಅವರ ತಲೆ ಮೇಲೆ ಪಟಾಕಿಯ ಅವಶೇಷ ಬಿದ್ದು, ಸಿತಾರಾ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










