ನಿಧಿ ಆಸೆಗಾಗಿ ಸ್ವಂತ ಅಜ್ಜಿಯನ್ನೇ ಬಲಿಕೊಟ್ಟ ಮೊಮ್ಮಗ…

173
firstsuddi

ಶಿರಸಿ : ನಿಧಿ ಆಸೆಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಗೊಲ್ಲರ್ ( 75 ) ಕೊಲೆಯಾದ ದುರ್ದೈವಿ. ಯಲ್ಲವ್ವ ಗೊಲ್ಲರ್ ಅವರ ಮೊಮ್ಮಗ ರಮೇಶ್ ಗೊಲ್ಲರ್ ಎಂಬುವನು ನಿಧಿಯಾಸೆಗಾಗಿ ಅಜ್ಜಿಯನ್ನೇ ಬಲಿ ಕೊಟ್ಟಿದ್ದಾನೆ ಎನ್ನಲಾಗಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.