27ನೇ ವಸಂತಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್-“ಬ್ಯಾಡ್ ಮ್ಯಾನರ್ಸ್” ಚಿತ್ರತಂಡದಿಂದ ಟೀಸರ್ ಗಿಫ್ಟ್…

108

ಬೆಂಗಳೂರು : ಸ್ಯಾಂಡಲ್‍ವುಡ್‍ನ ಹಿರಿಯ ನಟ, ಮಾಜಿ ಕೇಂದ್ರ ಸಚಿವ ದಿ|| ರೆಬಲ್‍ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ಇಂದು ತಮ್ಮ 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಷೇಕ್ ಅವರಿಗೆ ತಮ್ಮ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ದೊಡ್ಡ ಕೇಕ್ ತಯಾರಿಸಿ ಜೆ.ಪಿ. ನಗರದ ನಿವಾಸದ ಎದುರು ಸಿದ್ಧತೆ ಮಾಡಿಕೊಂಡಿದ್ದು, ಬಳಿಕ ಅಭಿಷೇಕ್ ಅವರು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅಲ್ಲದೇ ಹುಟ್ಟುಹಬ್ಬದ ಅಂಗವಾಗಿ ಅಭಿಷೇಕ್ ಅಭಿನಯದ “ಬ್ಯಾಡ್ ಮ್ಯಾನರ್ಸ್” ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಷೇಕ್ ಅವರಿಗೆ ಉಡುಗೊರೆಯನ್ನು ನೀಡಿದೆ.