ರೈಲು ಹಾಗೂ ಬಸ್ ನಡುವೆ ಭೀಕರ ಅಪಘಾತ-30 ಮಂದಿ ಸಾವು…

494
firstsuddi

ಇಸ್ಲಾಮಾಬಾದ್ : ರೈಲು ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ರೋಹ್ರಿ ರೈಲ್ವೇ ನಿಲ್ದಾಣದ ಬಳಿ ಇರುವ ಕಂಧ್ರಾ ರೈಲ್ವೇ ಕ್ರಾಸಿಂಗ್‍ನಲ್ಲಿ ನಿನ್ನೆ ರಾತ್ರಿ ರಾವಲ್ಪಿಂಡಿಯಿಂದ ಕರಾಚಿ ಕಡೆಗೆ ತೆರಳುತ್ತಿದ್ದ 45 ಅಪ್ ಪಾಕಿಸ್ತಾನ್ ಎಕ್ಸ್ ಪ್ರೆಸ್ ರೈಲು 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ 30ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಜಮೀಲ್ ಅಹ್ಮದ್ ಅವರು ತಿಳಿಸಿದ್ದು, ಘಟನೆಗೆ ಬಸ್ ಚಾಲಕನ ಅಜಾಗರುಕತೆಯೇ ಕಾರಣ ಎನ್ನಲಾಗಿದೆ.