ಹಾಸನ : ರಸ್ತೆ ಬದಿಯ ಕಟ್ಟಡಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಚೆನ್ನರಾಯಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ವಿವೇಕ್ ನಾಯಕ್, ಪತ್ನಿ ರೇಷ್ಮಾ ನಾಯಕ್ ಹಾಗೂ ಇಬ್ಬರು ಮಕ್ಕಳು ಮೃತ ದುರ್ದೈವಿಗಳು. ಮೃತ ಕುಟುಂಬ ಬೆಂಗಳೂರಿನ ಚಿಕ್ಕಬಾಣಾವರದವರು ಎನ್ನಲಾಗಿದ್ದು, ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










