ನಟ ಡಾ. ರಾಜ್ ಕುಮಾರ್ ಕಿಡ್ನಾಪ್ ಪ್ರಕರಣದ ತೀರ್ಪು ಪ್ರಕಟ…

584

ಈರೋಡ್: ಸುಮಾರು 18 ವರ್ಷಗಳ ಬಳಿಕ ನಟ ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ಕುರಿತು ಇಂದು ತೀರ್ಪು ಪ್ರಕಟಿಸಿದ್ದು,ಪ್ರಾಸಿಕ್ಯೂಶನ್‌ ಮತ್ತು ಪೊಲೀಸ್‌ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫ‌ಲವಾದ ಹಿನ್ನಲೆಯಲ್ಲಿ  9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.