ಆಗುಂಬೆ ಘಾಟಿ ವಾಹನ ಸಂಚಾರ ಮಾರ್ಚ್ 1 ರಿಂದ 31 ರವರೆಗೆ ಒಂದು ತಿಂಗಳ ಕಾಲ ಬಂದ್… 

239
firstsuddi
 ಶಿವಮೊಗ್ಗ : ಆಗುಂಬೆ ಘಾಟಿಯಲ್ಲಿ ಭಾರಿ  ಬಂಡೆಗಳ ಕುಸಿತ ಕಾರಣ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿ ಮಾರ್ಗದಲ್ಲಿ 14ನೇ ತಿರುವಿನಿಂದ 7ನೇ ತಿರುವಿನವರೆಗೆ ಹಾಗೂ 7ನೇ ತಿರುವಿನಿಂದ 1ನೇ ತಿರುವಿನ  ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ರಸ್ತೆ ದುರಸ್ತಿ ತುರ್ತು ಕಾಮಗಾರಿ ನಡೆಯುವುದರಿಂದ  ಇದೇ ಮಾರ್ಚ್ 1 ರಿಂದ 31 ರವರೆಗೆ ಒಂದು ತಿಂಗಳ ಕಾಲ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬದಲಿ ಮಾರ್ಗವಾಗಿ ತೀರ್ಥಹಳ್ಳಿ- ಮಾಸ್ತೀಕಟ್ಟೆ- ಕುಂದಾಪುರ-ಭಾಳೇಬರೆ ಘಾಟಿ(ಹುಲಿಕಲ್ ಘಾಟಿ) ಹಾಗೂ ತೀರ್ಥಹಳ್ಳಿ- ಶೃಂಗೇರಿ-ಕಾರ್ಕಳ ಘಾಟಿ ಮೂಲಕ ಸಂಚರಿಸಲು ಮಿನಿಬಸ್ಸ್ ಸೇವೆ ಒದಗಿಸಲಾಗುವುದಾಗಿ ತಿಳಿಸಲಾಗಿದೆ. ಸಾರ್ವಜನಿಕರು, ಬಸ್-ವಾಹನ ಲಾರಿ ಮಾಲೀಕರು ಸಹಕರಿಸಲು  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಮಾನ್ಯ ಕೆ.ಎ ದಯಾನಂದರವರು ಆದೇಶದೊಂದಿಗೆ ಮನವಿ ಮಾಡಿಕೊಂಡಿದ್ದಾರೆ.