ನವದೆಹಲಿ: ತಿರುಚಿಯಿಂದ ದುಬೈಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗುವಾಗ ಗೋಡೆಗೆ ಅಪ್ಪಳಿಸಿಸಿದ್ದು, ಅದೃಷ್ಟವಶಾತ್ 136 ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಚೆನೈನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು,ತಡರಾತ್ರಿ 1:30 ರ ಸುಮಾರರಿಗೆ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರನ್ ವೇ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಕೆಲ ಸಮಯದಲ್ಲೆ ಎಟಿಸಿ ಸಂಪರ್ಕ ಕಡಿತಗೊಂಡಿದ್ದು, ಬಳಿಕ ಮಂಗಳೂರು ಎಟಿಸಿ ಮೂಲಕ ಸಂಪರ್ಕ ಸಾಧಿಸಿ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಲು ಪೈಲೆಟ್ ಗೆ ಸೂಚಿಸಲಾಗಿತ್ತು,ನಂತರ ಮುಂಬೈನಿಂದ ಇನ್ನೊಂದು ವಿಮಾನದ ಮೂಲಕ ದುಬೈಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.










