ಮೂಡಿಗೆರೆಯ ಎಲ್ಲ ಸರ್ಕಾರಿ ಸೇವೆ ಮಾಡುವ ಸಿಬ್ಬಂದಿಗಳಿಗೆ ಸಿಪಿಐ ಜಗದೀಶ್‍ರವರ ಸೇವೆ ಮಾರ್ಗದರ್ಶನವಾಗುತ್ತದೆ: ಹೊರಟ್ಟಿ ರಘು…

596
firstsuddi

ಮೂಡಿಗೆರೆ: ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣೆ ನಿಮಿತ್ತ ಇಂಟಲಿಜೆನ್ಸ್ ಬ್ಯೂರೋ ಬೆಂಗಳೂರು ಇಲ್ಲಿಗೆ ವರ್ಗಾವಣೆಯಾದ ಮೂಡಿಗೆರೆಯಲ್ಲಿ ಸುಮಾರು ಮೂರು ವರ್ಷ ಎಂಟು ತಿಂಗಳು ನಿಷ್ಪಕ್ಷಪಾತ ಸೇವೆಯನ್ನು ಸಲ್ಲಿಸಿ ಇಲ್ಲಿನ ಮೂಡಿಗೆರೆ ವೃತ್ತದ ಬಾಳೂರು, ಗೋಣೀಬೀಡು, ಬಣಕಲ್, ಮೂಡಿಗೆರೆ,ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಜಗದೀಶ್‍ರವರಿಗೆ ಬಣಕಲ್ ಪೊಲೀಸ್ ಠಾಣಾ ಆವರಣದಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಕಲ್ಲಪ್ಪ ಹಂಡಿಬಾಗ್ ಮರಣದ ಕುರಿತು ಮೂರು ನಿಮಿಷ ಮೌನಾಚರಣೆ ಮಾಡಲಾಯಿತು.
ತಾಲ್ಲೂಕಿನ ವೃತ್ತ ನಿರೀಕ್ಷಕರಾಗಿ ಮೂಡಿಗೆರೆಯಲ್ಲಿ ಸೇವೆ ಸಲ್ಲಿಸುವಾಗ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು, ಪತ್ರಕರ್ತರು, ರಾಜಕಾರಣಿಗಳ ಪ್ರೇರಣೆಗೆ ಪಾತ್ರರಾಗಿ ನಿಷ್ಕಲ್ಮಶ ಸೇವೆಗೈದು ಎಲ್ಲರನ್ನು ಗಣನೆಗೆ ತೆಗೆದುಕೊಂಡು ತನ್ನ ಜವಾಬ್ದಾರಿಯನ್ನು ಅತ್ಯುನ್ನತ ಪಾರದರ್ಶಕತೆಯೊಂದಿಗೆ ಸೇವೆ ಸಲ್ಲಿಸಿದ ವೃತ್ತ ನೀರಿಕ್ಷಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತೀರಾ. ಇಂತಹ ಸೇವೆಯಿಂದ ಮೂಡಿಗೆರೆಯ ಎಲ್ಲ ರೀತಿಯ ಸರ್ಕಾರಿ ಸೇವೆ ಮಾಡುವ ಸಿಬ್ಬಂದಿಗಳಿಗೆ ನಿಮ್ಮ ಸೇವೆ ಮಾರ್ಗದರ್ಶನವಾಗುತ್ತದೆ ಎಂದು ಹಿರಿಯ ಪತ್ರಕರ್ತರಾದ ಹೊರಟ್ಟಿ ರಘು ಅವರು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವರ್ಗಾವಣೆಗೊಂಡ ವೃತ್ತ ನಿರೀಕ್ಷಕರಿಗೆ ಸನ್ಮಾನವನ್ನು ಏರ್ಪಡಿಸಿ ಮಾತನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಂಗಳೂರು, ಇದರ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು ನಮ್ಮ ತಾಲ್ಲೂಕಿನಲ್ಲಿ ಇದುವರೆಗೆ ಅನೇಕ ಜನ ವೃತ್ತ ನಿರೀಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದು, ಅದರಲ್ಲಿ ಇಲ್ಲಿಂದ ವರ್ಗವಣೆಗೊಳ್ಳುತ್ತಿರುವ ವೃತ್ತ ನಿರೀಕ್ಷಕರಾದ ಜಗದೀಶ್ ರವರಿಗೆ ತಾಳ್ಮೆ ಹಾಗೂ ಸಹನೆ ಜಾಸ್ತಿ. ಇವರ ವರ್ತನೆಯಿಂದ ಇದುವರೆಗೂ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇವರಿಗೆ ಬೆನ್ನೆಲುಬಾಗಿ ನಿಂತು ಅವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯನ್ನು ಮೆರೆದಿದ್ದಾರೆ. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ನಡುವೆ ಏನಾದರು ಘರ್ಷಣೆಗಳು ಏರ್ಪಟ್ಟಲ್ಲಿ ಇವರ ಮಧ್ಯಸ್ಥಿಕೆಯಿಂದ ಅಂತಹ ಸನ್ನಿವೇಶವನ್ನು ತಿಳಿಗೊಳಿಸುವ ವಿಶೇಷವಾದ ಶಕ್ತಿ ಇವರಿಗೆ ಇತ್ತು ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕರಾದ ಜಗದೀಶ್ ರವರು ನಾನು ತಾಲ್ಲೂಕಿನಲ್ಲಿ ಸುಮಾರು ಮೂರು ವರ್ಷ ಎಂಟು ತಿಂಗಳ ಕಾಲ ನನ್ನ ಮಟ್ಟಿಗೆ ಅತ್ಯುತ್ತಮ ಪಾರದರ್ಶಕತೆಯಿಂದ ಸೇವೆ ಮಾಡುವುದಕ್ಕೆ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪತ್ರಿಕಾ ಮಾದ್ಯಮದವರ ಸಹಕಾರ ಹಾಗೂ ಸಮಾಜ ಸೇವಕರ ಕೈಬಲ ನನ್ನ ಸೇವೆಯಲ್ಲಿ ಹೆಚ್ಚು ಶಕ್ತಿ ಲಭಿಸುವುದಕ್ಕೆ ಕಾರಣವಾಗಿದೆ. ನಾನು ಮಂಡ್ಯದವನಾಗಿದ್ದು, ನಾನು ಮತ್ತು ನನ್ನ ಕುಟುಂಬ ಸೌಮ್ಯ ಸ್ವಭಾವದವರಾಗಿದ್ದು, ಅದೇ ರೀತಿ ನನ್ನ ವೃತ್ತಿಯಲ್ಲೂ ಸೌಮ್ಯ ಸ್ವಭಾವದೊಂದಿಗೆ ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ. ಆದರೆ ವಿಶೇಷವಾಗಿ ಮೂಡಿಗೆರೆ ಜನತೆ ನನ್ನನ್ನು ಅತ್ಯಂತ ಗೌರವದಿಂದ ಕಂಡಿದ್ದು, ಇದಕ್ಕೆ ನಾನು ಅಬಾರಿಯಾಗಿರುತ್ತೇನೆ ಎಂದರು.

firstsuddi

ಕಾರ್ಯಕ್ರಮದಲ್ಲಿ ಬಣಕಲ್ ಪೊಲೀಸ್ ಠಾಣಾ ಸಿಬ್ಬಂದಿಗಳು, ಹಾಗೂ ಕಾರ್ಯನಿರತ ಪತ್ರಕರ್ತರ ಸಂಘವು ವರ್ಗಾವಣೆಗೊಂಡ ವೃತ್ತ ನಿರೀಕ್ಷಕರಿಗೆ ಗೌರವಪೂರಕ ಸನ್ಮಾನವನ್ನು ನೀಡಿ ಸನ್ಮಾನಿಸಿದರು. ಪತ್ರಕರ್ತರಾದ ಅನಿಲ್ ಮಂತಾರೋ, ತನು ಕೊಟ್ಟಿಗೆಹಾರ, ಸೋಮಶೇಖರ್, ಮನ್ಸೂರ್ ಹೆಚ್.ಆರ್, ಶಾರದಾ, ಸಂತೋಶ್ ಅತ್ತಗೆರೆ, ಪುನೀತ್ ಕಡಿದಾಳ್, ಸಮಾಜಸೇವಕರಾದ ಪಿಶ್ ಮೋಣು, ತಾಲ್ಲೂಕು ಶಸ್ತ್ರಚಿಕಿತ್ಸಕರಾದ ಡಾ.ಸಂತೋಶ್, ಡಾ.ಸುನೀಲ್, ಇಲಾಖೆಯ ಸಿಬ್ಬಂದಿಗಳು ಹಾಗೂ ಮುಂತಾದವರು ಇದ್ದರು.