ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ : ಸಿಎಂ ಸಿದ್ದರಾಮಯ್ಯ

493
firstsuddi

ಬೆಂಗಳೂರು : ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟುದಿನ ದುಡಿದುಕೊಂಡು ತಿಂದವರು ಕೆಲ ದಿನ ದುಡಿಯದೇ ತಿಂದರೆ ಏನ್ ತಪ್ಪು ? ಬಡವರು ಕೆಲ ದಿನ ರೆಸ್ಟ್ ಮಾಡ್ಲಿ ಬಿಡಿ ಎಂದು  ತಮ್ಮ ಮಹತ್ವಾಕಾಂಕ್ಷೆಯ  ಅನ್ನ ಭಾಗ್ಯ ಯೋಜನೆಯನ್ನು  ಸಮರ್ಥಿಸಿಕೊಂಡಿದ್ದಾರೆ.   ಸಂಪ್ರದಾಯದ ಹೆಸರಲ್ಲಿ ಕಂದಾಚಾರ ,ಮೌಡ್ಯಗಳು ಹೆಚ್ಚಾಗುತ್ತಿವೆ.   ನನ್ನ ಕಾರಿನ ಮೇಲೆ ಕಾಗೆ ಕುಳಿತರೆ  ಅದನ್ನ ಶನಿ ಕಾಟ ಅಂತಾ ಕರೆದರು.  ಪಾಪ ಆ ಕಾಗೆಗೆ ಒಂದು ಕಣ್ಣು ಕಾಣ್ತಿರ್ಲಿಲ್ಲಾ ಹಾಗಾಗಿ  ನನ್ನ ಕಾರಿನ ಮೇಲೆ  ಕುಳಿತಿತ್ತು.  ಈ ಮೌಡ್ಯಗಳನ್ನ ತಡೆಯಲು ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದೇವೆ. ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ, ಮನುಷ್ಯತ್ವ ಇಲ್ಲದವನು ಹಿಂದೂ ಆಗಲಾರ.  ಮಾಧ್ಯಮಗಳೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.