ಮೂಡಿಗೆರೆ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ ಅವರು ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಬೆಳಗಾವಿಯಲ್ಲಿ ಕಾಂಗ್ರೆಸ್ ಕಟ್ಟಿ, ಆಳಿದವರು ಅವರು ಕಾಂಗ್ರೆಸ್ ಬಿಡ್ತಾರೆ ಅನ್ನೋದು ಸುಳ್ಳು ಎಂದಿದ್ದಾರೆ. ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಸವರಾಜ್ ಹೊರಟ್ಟಿ ಅವರು ಅವರು ಬುದ್ಧಿವಂತ, ಮೇಧಾವಿ ಹಾಗೂ ಹಿರಿಯ ರಾಜಕಾರಣಿ, ಅವರಿಗೆ ಜೆಡಿಎಸ್ ನವರು ಸಚಿವ ಸ್ಥಾನ ನೀಡಬೇಕು. ವಿರೋಧ ಪಕ್ಷ ಇರೋದೆ ಕೆದಕಿ ಏನಾದ್ರು ಹೇಳುವುದಕ್ಕೆ, ಅವರು ಏನೇ ಹೇಳಿದ್ರು ನಮ್ಮ ಸರ್ಕಾರ ಭದ್ರವಾಗಿದೆ ಎಂದು ತಿಳಿಸಿದ್ದಾರೆ.









