ಚಿಕ್ಕಮಗಳೂರಿನ ಹೊಸಪೇಟೆ ಗ್ರಾಮದಲ್ಲಿ, ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್ ಪತ್ತೆ…

1017
firstsuddi

ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್ ಪತ್ತೆಯಾಗಿದ್ದು, ಮನೆಯ ಹಂಚು ತೆಗೆದು ಕಳ್ಳತನಕ್ಕೆ ಯತ್ನಿಸುತ್ತಿರುವಾಗ ಒರ್ವ ಮಹಿಳೆಯನ್ನು ಸೆರೆ ಹಿಡಿದಿದ್ದು, ಇಬ್ಬರು ಪುರುಷರು ಪರಾರಿಯಾಗಿದ್ದು,ಹೊಸಪೇಟೆ ಗ್ರಾಮದ ಜಾನ್ ಎಂಬುವವರ ಮನೆಯ ಹಂಚು ತೆಗೆದು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಮಹಿಳೆಯನ್ನು ಸೆರೆಹಿಡಿಯಲಾಯಿತು.ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಪುರುಷರು ಪರಾರಿಯಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಹಿಳೆಯ ಬಳಿ ಐದಾರು ಸಿಮ್ ಕಾರ್ಡ್, ಕ್ರೇಡಿಟ್ ಕಾರ್ಡ್,ಕತ್ತರಿ ,ಪರ್ಸ್, ಹಾಗೂ ಮುಂಬೈ, ರಾಜಸ್ತಾನ,ಅಸ್ಸಾಂ, ರಾಜ್ಯದ ಬಿಲ್ ಗಳು ಪತ್ತೆಯಾಗಿದ್ದು,ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.