ಬೆಂಗಳೂರು: ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ ಸಮ್ಮಿಶ್ರ ಸರ್ಕಾರದ ಕ್ರಮವನ್ನು ಬಿಜೆಪಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದು, ಕಾಂಗ್ರೆಸ್- ಜೆಡಿಎಸ್ ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಲಾಗಿದೆ. ಮುಂದೆ ವಿಧಾನ ಸೌಧವನ್ನೂ ಹಾಸನಕ್ಕೆ ಸ್ಥಳಾಂತರಿಸಿದರೆ ಅಚ್ಚರಿಪಡಬೇಕಾಗಿಲ್ಲ. ಕುಮಾರಸ್ವಾಮಿಯವರ ಸರ್ಕಾರದಲ್ಲಿ ಉಳಿದೆಲ್ಲ ಜಿಲ್ಲೆಗಳ ಸೌಕರ್ಯಗಳು, ಅಭಿವೃದ್ಧಿಕಾರ್ಯಗಳು ಮಂಡ್ಯ, ಹಾಸನ, ರಾಮನಗರಗಳಿಗೆ ಸ್ಥಳಾಂತರಿಸುವುದು ಖಾತರಿಪಡಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.