ವಿಧಾನ ಸಭಾ ಚುನಾವಣೆ : ಫೈನಲ್ ಆಯ್ತು ಮೂಡಿಗೆರೆಗೆ ಬಿಜೆಪಿಯ ಅಭ್ಯರ್ಥಿ ಹೆಸರು, ಯಾರು ಗೊತ್ತಾ !?

1251

ಬೆಂಗಳೂರು : ವಿಧಾನ ಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಹೆಸರು ಫೈನಲ್ ಆಗಿದೆ ಎಂಬ ಮಾಹಿತಿ ಫಸ್ಟ್ ಸುದ್ದಿಗೆ ಬಿಜೆಪಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಆಕಾಂಕ್ಷಿಗಳು ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ, ದೀಪಕ್ ದೊಡ್ಡಯ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಣಕಲ್ ಶಾಮಣ್ಣ, ಶೃಂಗೇರಿ ಶಿವಣ್ಣ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರು.

ಇವರೆಲ್ಲವೂ ಕೂಡಾ ಎಂ.ಪಿ. ಕುಮಾಸ್ವಾಮಿಯಷ್ಟು ವರ್ಚಸ್ಸಿಲ್ಲದ ಕಾರಣ ಯಾರಿಗೂ ಮನಸ್ಸು ಮಾಡಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಕೊಡಲೇಬೇಕೆಂಬ ದೊಡ್ಡ ಕೂಗಾ ಕ್ಷೇತ್ರದಾದ್ಯಂತ ಕೇಳಿಬರುತ್ತಿದ್ದು, ಬಿಜೆಪಿಯಲ್ಲಿ ಕುಮಾರಸ್ವಾಮಿ ಒಬ್ಬರೇ ಕ್ಷೇತ್ರದಲ್ಲಿ ಗೆಲ್ಲುವ ಸ್ಪರ್ಧಿ ಎನ್ನುವ ಮಾತುಗಳು ಇವೆ. ಹಾಗಾಗಿ ಬಿಜೆಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ಫೈನಲ್ ಮಾಡಿದೆಂಬ ಮಾಹಿತಿ ಲಭ್ಯವಾಗಿದೆ.