ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿಯವರ ‘ಬಾಹುಬಲಿ -2’ ಭರ್ಜರಿ ಯಶಸ್ಸು ಕಂಡ ಚಿತ್ರ. ದೇಶ, ವಿದೇಶಗಳಲ್ಲಿ ಗಮನ ಸೆಳೆದ ಈ ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದರೂ, ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ‘ಬಾಹುಬಲಿ’ ಪ್ರಭಾಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ವೈರಲ್ ಆಗಿವೆ.
ಬೆಡಗಿಯೊಬ್ಬಳು ತನ್ನ ಬೆತ್ತಲೆ ಬೆನ್ನಿನ ಮೇಲೆ ‘ಬಾಹುಬಲಿ’ ಪ್ರಭಾಸ್ ಚಿತ್ರವನ್ನು ಬರೆಸಿಕೊಂಡಿದ್ದಾಳೆ. ಮತ್ತೊಬ್ಬಳು ಪ್ರಭಾಸ್ ಹೆಸರು ಬರೆಸಿಕೊಂಡು ಸಂಭ್ರಮಿಸಿದ್ದಾಳೆ.’ಬಾಹುಬಲಿ’ ನಂತರದಲ್ಲಿ ಪ್ರಭಾಸ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿಯೂ ಮಹಿಳಾ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗೆ ಪ್ರಭಾಸ್ ಅಭಿಮಾನಿಗಳು ಬರೆಸಿಕೊಂಡ ಈ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ.ಫೋಟೋದಲ್ಲಿ ಪ್ರಭಾಸ್ ಚಿತ್ರವಿದ್ರೆ, ವಿಡಿಯೋದಲ್ಲಿ ಪ್ರಭಾಸ್ ಹೆಸರು ಮತ್ತೆ ಚಿಟ್ಟೆಯೊಂದನ್ನು ಚಿತ್ರಿಸಲಾಗಿದೆ.
ಇದು ಪ್ರಭಾಸ್ ಗೆ ಅರ್ಪಣೆ ಎಂದು ಹೇಳಲಾಗಿದೆ. ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಕೆಲವೊಮ್ಮೆ ಅಭಿಮಾನ ಅತಿರೇಕವಾಗುತ್ತದೆ. ಮತ್ತೆ ಕೆಲವೊಮ್ಮೆ ನಟರನ್ನು ಅನುಕರಿಸಲು ಹೋಗಿ ಕೆಲವರು ಅಪಾಯ ತಂದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ಪ್ರವಾಸಿಗನೊಬ್ಬ ‘ಬಾಹುಬಲಿ’ ರೀತಿ ಸೊಂಡಿಲ ಮೂಲಕ ಆನೆಯನ್ನು ಹತ್ತಲು ಹೋಗಿದ್ದು, ಆಕ್ರೋಶಗೊಂಡ ಆನೆ ಆತನನ್ನು ಎತ್ತಿ ಬಿಸಾಕಿತ್ತು.










