ಮೂಡಿಗೆರೆ- ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬ್ಯಾಂಕಿಂಗ್ ಸೇವೆ ನಡೆಸಲು ಪಂಚಾಯತ್ ರಾಜ್ ಇಲಾಖೆ ಸಿದ್ದತೆ ನಡೆಸಿರುವ ಬೆನ್ನಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಬ್ಯಾಂಕಿಂಗ್ ವ್ಯವಸ್ಥೆಗೆ ಸಜ್ಜಾಗಿದ್ದು,
ಬಣಕಲ್ ಗ್ರಾಮ ಪಂಚಾಯತಿಯ ಒಳ ಪ್ರವೇಶಿಸುತ್ತಿದಂತೆಯೆ ಬ್ಯಾಂಕ್ ಗೆ ಹೋದ ಅನುಭವ ಉಂಟಾಗುತ್ತದೆ. ಸುಸಜ್ಜಿತವಾದ ಕೌಂಟರ್ ಗಳು , ಕ್ಯಾಶ್ ಕೌಂಟರ್ ಗಳು , ಮ್ಯಾನೇಜರ್ ಕ್ಯಾಬೀನ್ ನಂತೆ ಕಾಣುವ ಅಧ್ಯಕ್ಷರು ಮತ್ತು ಪಿಡಿಓಗಳ ಕ್ಯಾಬಿನ್‍ಗಳು ಬ್ಯಾಂಕ್‍ನ ಅನುಭವವನ್ನು ನೀಡುತ್ತವೆ. ಸುಮಾರು 14 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ದಾನಿಗಳ ಸಹಾಯದಿಂದ 7 ಲಕ್ಷ, ಸರ್ಕಾರದ ಅನುದಾನದಲ್ಲಿ 7 ಲಕ್ಷದೊಂದಿಗೆ ತಾಲ್ಲೂಕಿನಲ್ಲಿಯೆ ಹೈಟೆಕ್ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಾಮೀಣ ಭಾಗದ ಜನರು ಇನ್ನೂ ಮುಂದೆ ಸಣ್ಣಪ್ರಮಾಣದ ಹಣ ವರ್ಗಾವಣೆಯಂತಹ ವ್ಯವಹಾರ ನಡೆಸುವಾಗ ನಗರಗಳಿಗೆ ಅಲೆಯಬೇಕಿಲ್ಲ. ಸದ್ಯದಲ್ಲೆ ಗ್ರಾಮ ಪಂಚಾಯಿತಿ ಗಳಲ್ಲೂ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಲಿದೆ. ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳಲ್ಲಿ ಬ್ಯಾಂಕ್ ಕೌಂಟರ್ ತೆರಯಲು ಸಿದ್ದತೆ ನಡೆಸಿದ ಬೆನ್ನಲ್ಲೆ ಬಣಕಲ್ ಗ್ರಾಮ ಪಂಚಾಯಿತಿ ಒಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಕ್ ಕೌಂಟರ್‍ಗಳನ್ನು ಸಿದ್ದಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ದಾನಿಗಳ ನೆರವಿನಿಂದ ಮತ್ತು ಗ್ರಾಮ ಪಂಚಾಯಿತಿ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಸುಸಜ್ಜಿತ ಗ್ರಾಮ ಪಂಚಾಯತಿ ಕಟ್ಟಡ ತಲೆ ಎತ್ತಿದೆ. ಪಂಚಾಯತ್ ರಾಜ್ ಇಲಾಖೆ ಈಗಾಗಲೇ ಗ್ರಾಮ ಪಂಚಾಯತಿಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮಾಡಲು ಸಿದ್ದತೆ ಮಾಡಿಕೊಳ್ಳುವ ಮೊದಲೆ ಗ್ರಾಮ ಪಂಚಾಯತಿಯಲ್ಲಿ ಬ್ಯಾಂಕ್ ಮಾದರಿಯಲ್ಲಿ ಕೌಂಟರ್ ಗಳನ್ನು ನಿರ್ಮಿಸಲಾಗಿದೆ.