ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ನೋವುಂಟಾಗಿದೆ : ಬಿ.ಸಿ.ಪಾಟೀಲ್…

311
firstsuddi

ಹಾವೇರಿ: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಸಿ.ಪಾಟೀಲ್ ಅವರು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ನೋವುಂಟಾಗಿದೆ. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಾನು ಒಬ್ಬನೇ ಲಿಂಗಾಯತ ಶಾಸಕ. ಈ ಬಾರಿ ಸಚಿವ ಸ್ಥಾನ ಸಿಗೋ ಭರವಸೆ ಇತ್ತು. ಹಾವೇರಿ ಜಿಲ್ಲೆಯ ಬಗ್ಗೆ ಯಾರು ಕೇಳುವವರೇ ಇಲ್ಲದಂತಾಗಿದೆ. ನನ್ನ ಗಾಡ್ ಫಾದರ್ ಸಿದ್ದರಾಮಯ್ಯ. ನಾನು ಸಿದ್ದರಾಮಯ್ಯ ಅವರನ್ನೇ ನಂಬಿದ್ದೆ. ಅವರು ಮನಸ್ಸು ಮಾಡಿದ್ದರೆ ನನಗೆ ಮಂತ್ರಿ ಸ್ಥಾನ ಸಿಗುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.