ಜನವರಿ 8, 9ರಂದು ಭಾರತ್ ಬಂದ್‍…

366
firstsuddi

ನವದೆಹಲಿ :ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ, ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮಂಗಳವಾರ ಹಾಗೂ ಬುಧವಾರ ಎರಡು ದಿನ ಭಾರತ್ ಬಂದ್​ ಗೆ ಕರೆ ನೀಡಿದೆ.  ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು,  ಓಲಾ ಮತ್ತು ಊಬರ್ ಕ್ಯಾಬ್‍ ಗಳು ಬಂದ್ ​ಗೆ ಬೆಂಬಲ ನೀಡಿಲ್ಲ.ಅಂಗಡಿ ಮುಂಗಟ್ಟುಗಳು, ಹೊಟೇಲ್‌,ಆಸ್ಪತ್ರೆಗಳು, ಮೆಡಿಕಲ್ ಶಾಪ್, ಹಾಲು, ತರಕಾರಿ, ಪೇಪರ್, ಆ್ಯಂಬುಲೆನ್ಸ್ ಸೇವೆ, ಎಂದಿನಂತೆ ಇರಲಿದ್ದು ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ತಿಳಿದು ಬಂದಿದೆ.