ಕಳುವಾಗಿದ್ದ ಹೊರನಾಡು ಭೀಮೇಶ್ವರ ಜೋಷಿಯವರ ಹಣ ವಾಪಸ್ಸು ಬಂತು ? ಮೋಸ ಮಾಡಿದ್ರೆ ಅನ್ನಪೂರ್ಣೇಶ್ವರಿ ತಾಯಿ ಸುಮ್ಮನೆ ಬಿಡ್ತಾಳಾ !

1052

ಮೂಡಿಗೆರೆ : ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ್ ಜೋಷಿಯವರು ತಮ್ಮ ಪತ್ನಿಯೊಂದಿಗೆ ಯೂರೋಪ್ ಪ್ರವಾಸದಲ್ಲಿದ್ದಾಗ ಅವರ ಎಟಿಎಂ ಕಾರ್ಡ್ ಅನ್ನ ದುರುಪಯೋಗ ಪಡಿಸಿಕೊಂಡು ಕಳಸದ ಕರ್ನಾಟಕ ಬ್ಯಾಂಕ್ ನಿಂದ 20,89,558,64 ಹಣವನ್ನ ಡ್ರಾ ಮಾಡಿಕೊಂಡಿದ್ದರು. ಯೂರೋಪ್ ಪ್ರವಾಸದಿಂದ ಹಿಂದಿರುಗಿದ ಶ್ರೀ ಭೀಮೇಶ್ವರ ಜೋಷಿಯವರು ಈ ಸಂಬಂಧ ಕಳಸ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿರುವಾಗ್ಲೇ ಕಳಸಾದ ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಅದರ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಾಬಲೇಶ್ವರ ಭಟ್ಟರು ಜೋಷಿಯವರ ಖಾತೆಯಿಂದ ಡ್ರಾ ಆದ ಅಷ್ಟೂ ಮೊತ್ತವನ್ನ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬ್ಯಾಂಕ್ ಗ್ರಾಹಕರ ಸಮಸ್ಯೆಗೆ ಸ್ಪಂದಿಸಿದ ರೀತಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿರೋದಾಗಿ ಭೀಮೇಶ್ವರ ಜೋಷಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಆದರೆ, ದೂರು ನೀಡಿ 29 ದಿನ ಕಳೆದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಇನ್ನೂ ಬಂಧನವಾಗಿಲ್ಲ. ಈ ನಡುವೆ ಬ್ಯಾಂಕ್ ಅಷ್ಟು ದೊಡ್ಡ ಮೊತ್ತದ ಹಣವನ್ನ ವಾಪಸ್ಸು ನೀಡಿದ್ದಾರಂದ್ರೆ ಹೇಗೆ ಸಾಧ್ಯ. ಕಳ್ಳರು ಸಿಗದೆ ಹಣ ಎಲ್ಲಿಂದ ಬಂತು. ಯಾರು ಕೊಟ್ಟರು. ಬ್ಯಾಂಕ್ ನವರೇ ಕೊಟ್ಟರಾ. ಇಲ್ಲ ನಿಜಕ್ಕೂ ಹಣ ಹೋಗಿತ್ತಾ. ಬ್ಯಾಂಕ್ ನವರೇ ಹೆಚ್ಚು ಕಮ್ಮಿ ಮಾಡಿದ್ದರಾ. ಎಂಬೆಲ್ಲಾ ಹತ್ತಾರು ಪ್ರಶ್ನೆಗಳು ಸಾರ್ವಜನಿಕರ ತಲೆಯಲ್ಲಿ ಮೂಡುತ್ತಿವೆ. ಯಾಕಂದ್ರೆ, ಜನಸಾಮಾನ್ಯರು 1000 ಕಳೆದುಕೊಂಡ್ರೆ ಬ್ಯಾಂಕ್ ಗೆ ಸೈಕಲ್ ಹೊಡೆಯಬೇಕು. ಅಂತದ್ರಲ್ಲಿ ಕೇಸ್ ಮುಗಿಯದೆ, ಕಳ್ಳರು ಸಿಗದೆ, ಅಷ್ಟು ಹಣ ವಾಪಸ್ ನೀಡಲು ಕಾರಣವೇನು, ಎಲ್ಲಿಯ ಹಣ ಅನ್ನೋದನ್ನ ಬ್ಯಾಂಕ್ ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಅನ್ನೋದು ಜನಸಾಮಾನ್ಯರ ಪ್ರಶ್ನೆ…

 

LEAVE A REPLY

Please enter your comment!
Please enter your name here