ಮೂಡಿಗೆರೆ : ಮೂಡಿಗೆರೆಯ ಹೆಸರಾಂತ ಗವಿಕಲ್ ಕ್ಲಬ್ ವತಿಯಿಂದ ಇಂದು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಜನ್ನಾಪುರ ರಸ್ತೆಯ ಪ್ರಶಾಂತವಾದ ವಾತಾವರಣದಲ್ಲಿ ನಿರ್ಮಾಣವಾಗಿರೋ ಬೃಹತ್ ಕ್ಲಬ್ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಗೋಣಿಬೀಡು ಜೆಸಿಐ, ಕರ್ನಾಟಕ ಧ್ವನಿ ಸಂಘ ಹಾಗೂ ಗೋಣಿಬೀಡು ರೋಟರಿ ಕ್ಲಬ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ರಕ್ತದಾನ ಮಾಡಿ, ಮತ್ತೊಬ್ಬರ ಪ್ರಾಣ ಉಳಿಸಲು ಪರೋಕ್ಷವಾಗಿ ಕಾರಣ ಕರ್ತರಾದರು. ಮೂಡಿಗೆರೆ ಸಬ್‍ಇನ್ಸ್‍ಪೆಕ್ಟರ್ ರಫೀಕ್ ಮಾತನಾಡಿ, ಕ್ಲಬ್ ಎಂದರೆ ಕಾಡ್ರ್ಸ್ ಆಡೋದಕ್ಕೆ ಎಂಬ ಭಾವನೆ ಇರುತ್ತೆ. ಆದ್ರೆ, ಗವಿಕಲ್ ಕ್ಲಬ್ ಅನ್ನೋದು ವಿಭಿನ್ನ ರಕ್ತದಾನ ಶಿಬಿರದಂತಹಾ ಅರ್ಥಪೂರ್ಣ ಕಾರ್ಯಕ್ರಮ ಮಾಡ್ತಿರೋದು ನಿಜಕ್ಕೂ ಸಂತೋಷಕರ ಸಂಗತಿ ಎಂದು ಕ್ಲಬ್ ಹಾಗೂ ಕ್ಲಬ್‍ನ ಸದಸ್ಯರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಗವಿಕಲ್ ಕ್ಲಬ್ ಅಧ್ಯಕ್ಷ ಸತೀಶ್ ಮಾತನಾಡಿ, ಸಮಾನ ಮನಸ್ಕರೆಲ್ಲಾ ಸೇರಿ ಕ್ಲಬ್ ನಿರ್ಮಿಸಬೇಕೆಂದು ಮುಂದಾದಾಗ ಎಲ್ಲರೂ ಒಮ್ಮತದಿಮದ ಸಹಕಾರ ನೀಡಿ ಕ್ಲಬ್ ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲೂ ಕ್ಲಬ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿರುತ್ತೆ ಎಂದು ಕ್ಲಬ್ ನಡೆದು ಬಂದ ಹಾದಿಯನ್ನ ಮೆಲುಕು ಹಾಕಿದರು. ಚಿಕ್ಕಮಗಳೂರಿನ ವಾತ್ಸಲ್ಯ ಆಸ್ಪತ್ರೆಯ ಪ್ರೊಪರೇಟರ್ ಜೆ.ಪಿ.ಕೃಷ್ಣೇಗೌಡ ಮಾತನಾಡಿ, ರಕ್ತದಾನ ಮಾಡಿದರೆ ಯಾವುದೇ ತೊಂದರೆಯಾಗಲ್ಲ. ಮನುಷ್ಯ ತನ್ನ ಏಳು ಅಂಗಗಳನ್ನ ದಾನ ಮಾಡಬಹುದು. ನನ್ನ ಎರಡೂ ಕಿಡ್ನಿಗಳು ಫೇಲ್ ಆದಾಗ, ದಾನಿಯೊಬ್ರು ಒಂದು ಕಿಡ್ನಿಯನ್ನ ದಾನ ಮಾಡಿದ್ರು. ಒಂದು ಕಿಡ್ನಿಯಿಂದ ನಾನು ಆರೋಗ್ಯವಂತನಾಗಿದ್ದಾನೆ ಎಂದು ಜನಸಾಮಾನ್ಯರಿಗೆ ಸಾಕಷ್ಟು ಉಪಯುಕ್ತವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗೋಣಿಬೀಡು ಸಬ್ ಇನ್ಸ್‍ಪೆಕ್ಟರ್ ರಾಘವೇಂದ್ರ, ಅಲ್ತಾಫ್, ನವಕರ್ನಾಟಕ ಯುವಶಕ್ತಿ ಅಧ್ಯಕ್ಷ ಲಿಂಗೇಗೌಡ ಉಪಸ್ಥಿತರಿದ್ದರು. ಜನ್ನಾಪುರ ಸುಧೀರ್ ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದರೆ, ಗಂಗಾಧರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
Home ಸ್ಥಳಿಯ ಸುದ್ದಿ ಕ್ಲಬ್ ಅಂದರೆ ಕೇವಲ ಕಾಡ್ರ್ಸ್ ಆಡೋಕಷ್ಟೆ ಅಲ್ಲ, ಗವಿಕಲ್ ಕ್ಲಬ್ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪಿಎಸ್‍ಐ...