ಬರಿಗಾಲಲ್ಲೇ 3000 ಅಡಿ ಬೆಟ್ಟವನ್ನೇರಿ ದೇವಿರಮ್ಮ ದರ್ಶನಕ್ಕೆ ಲಕ್ಷಾಂತರ ಭಕ್ತರ ಕಾತರಕ್ಕೆ ಕ್ಷಣಗಣನೆ

1711

ಚಿಕ್ಕಮಗಳೂರು : ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿ ದೇವರ ಮೊರೆ ಹೋಗ್ತಾರೆ. ಆದ್ರೆ, ಚಿಕ್ಕಮಗಳೂರಿನ ದೇವಿರಮ್ಮನ ಭಕ್ತರು ತಮ್ಮ ಬಯಕೆ ಈಡೇರಿಸಿಕೊಳ್ಳಲು ಸೃಷ್ಠಿಕರ್ತರೆದುರು ದೇಹವನ್ನು ದಂಡಿಸಿಸ್ತಾರೆ. ಬರಿಗಾಲಲ್ಲೇ 3,000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳೋ ನಿರೀಕ್ಷೆ ಇದೆ. ಮುಂದಿನ ಮಂಗಳವಾರ ರಾತ್ರಿ ಅಂದ್ರೆ ಬುಧವಾರ ಬೆಳಗ್ಗಿನ ಜಾವ ಬೆಟ್ಟ ಹತ್ತೋ ಲಕ್ಷಕ್ಕೂ ಅಧಿಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡ್ಕೊಂಡಿದೆ. ನರಕ ಚತುರ್ದಶಿಯಂದೇ ನಡೆಯುತ್ತೆ ಈ ವಿಶಿಷ್ಟ ಆಚರಣೆ.

ಹರಕೆ ತೀರಿಸೋದಕ್ಕೆ ಭಕ್ತರು ಧಾನ್ಯ, ಚಿನ್ನ ಅಥವ ಹಣದ ಸೇವೆ ಮೂಲಕ ದೇವರಿಗೆ ಭಕ್ತಿ ಸಮರ್ಪಿಸ್ತಾರೆ. ಆದ್ರೆ, ಚಿಕ್ಕಮಗಳೂರಿನ ದೇವಿರಮ್ಮ ಅದ್ಯಾವುದನ್ನೂ ಕೇಳಲ್ಲ. ದೇವಿರಮ್ಮನ ಭಕ್ತರು ಕೂಡ ಕೊಂಚ ವಿಭಿನ್ನ. ಯಾಕಂದ್ರೆ, ಇಷ್ಟಾರ್ಥ ಸಿದ್ಧಿಗಾಗಿ ದೇವಿರಮ್ಮನ ಭಕ್ತರಿಲ್ಲಿ ದೇಹ ದಂಡಿಸ್ತಾರೆ. ಚಿಕ್ಕಮಗಳೂರಿನ ಮಲ್ಲೇನಹಳ್ಳಿಯ ಬಿಂಡಿಗ ಬಳಿಯ ಸುಮಾರು 3,000 ಅಡಿಗಳಷ್ಟು ಎತ್ತರದಲ್ಲಿರೋ ಪಿರಮಿಡ್ ಆಕಾರದ ಬೆಟ್ಟದಲ್ಲಿ ನೆಲೆಸಿರೋ ದೇವಿರಮ್ಮ ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ದಿಸೋ ದೇವತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ತಾರೆ.

 ಚಿಕ್ಕಮಗಳೂರಿನಿಂದ ತರೀಕೆರೆಗೆ ಸಾಗೋ ಮಾರ್ಗದಲ್ಲಿ ದೇವಿರಮ್ಮನ ದೇವಾಲಯವಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಇಳಿವಯಸ್ಸಿನವರೂ ಸಹ ಯಾವುದೇ ಭಯವಿಲ್ಲದೆ ಬೆಟ್ಟ ಹತ್ತುತ್ತಾರೆ. ಲಕ್ಷಕ್ಕೂ ಅಧಿಕ ಜನ, 20 ಸಾವಿರಕ್ಕೂ ಅಧಿಕ ವಾಹನಗಳಿಗ ಪಾರ್ಕಿಂಗ್ ಹಾಗೂ ಬಸ್ಸಿನ ವ್ಯವಸ್ಥೆ, ಕುಡಿಯೋ ನೀರು, ಆಂಬುಲೆನ್ಸ್ ಸೇರಿದಂತೆ ಭಕ್ತರಿಗೆ ಕೊರತೆಯುಂಟಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡ್ತಿದೆ. ಈ ಬಾರಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬೆಟ್ಟವನ್ನೆರೋ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬೆಟ್ಟವನ್ನ ಹತ್ತೋ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ಬೆಟ್ಟದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿದೆ. ದೇವಾಲಯದ ಆವರಣದಲ್ಲೂ ಕೂಡ ಭಕ್ತರಿಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

ಕಾಫಿನಾಡಲ್ಲಿ ನೆಲೆಸಿರುವ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಅಗಣಿತ ಮಂದಿ ಭಕ್ತರ ಪಾಲಿಗೆ ಬೇಡಿಕೆಯನ್ನೆಲ್ಲಾ ಈಡೇರಿಸೋ ಕರುಣಾಳು ಅಂದ್ರೆ ತಪ್ಪಲ್ಲ. ಜನರು ತಮ್ಮ ಆಸೆ, ಆಶೋತ್ತರಗಳನ್ನು ಈಡೇರಿಸುವ ದೇವಿಯಾಗಿ ದೇವಿರಮ್ಮನನ್ನು ನಂಬಿ ವರ್ಷಕ್ಕೊಂದು ಭಾರಿ ನಿಷ್ಕಲ್ಮಷ ಮನಸ್ಸಿನಿಂದ ತಮ್ಮ ಕೈಲಾದಷ್ಟು ಮಟ್ಟಿಗೆ ಭಕ್ತಿ ಸಮರ್ಪಿಸಿ ಪಾವನರಾಗ್ತಾರೆ. ಈ ತಾಯಿಯ ಶಕ್ತಿಯಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here