ಇನ್ನಾದ್ರೂ ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಲಿ : ಬಿಜೆಪಿ ಟ್ವಿಟ್ …

371
firstsuddi

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದ್ದು, ಇದನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲೇವಡಿ ಮಾಡಿದೆ.
ದಿನಗಳು ನೂರು, ಹೋದಲೆಲ್ಲ ಕಣ್ಣೀರು,ಅಭಿವೃದ್ಧಿಗೆ ಎಳ್ಳುನೀರು!, ಮಾನ್ಯ ಕುಮಾರಸ್ವಾಮಿಯವರೇ, ಅಪವಿತ್ರ ಮೈತ್ರಿಯಲ್ಲಿನ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇವೆ.ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದೆ.