ಹಾಸನ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಿ ಎಂಬ ಅನಿರುದ್ಧ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಯಿಸಿದ್ದು, ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರಿಗೆ ಸರ್ಕಾರ ಗೌರವ ನೀಡುತ್ತದೆ. ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ವಿಷ್ಣು ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾನು ಹೋಗಿ ದರ್ಶನ ಪಡೆದಿದ್ದೆ. ಆಗ ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸ್ಮಾರಕ ನಿರ್ಮಿಸುವಂತೆ ಮನವಿ ಮಾಡಿದ್ದೆ. ಅನಿರುದ್ಧ್ ಅವರು ಸರ್ಕಾರಕ್ಕೆ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಿಸಲಿ ಎಂದಿದ್ದಾರೆ. ಹಾಗೂ ನನಗೆ ಉಡಾಫೆ ಮುಖ್ಯಮಂತ್ರಿ ಎಂದಿದ್ದಾರೆ ಇದೆಲ್ಲ ನನಗೆ ತುಂಬ ನೋವು ತಂದಿದೆ ನಮ್ಮ ಮೇಲೆ ದಬ್ಬಾಳಿಕೆ ಬೇಡ ಎಂದಿದ್ದಾರೆ.










