ಚಿಕ್ಕಮಗಳೂರಲ್ಲಿ ಹೊತ್ತಿ ಉರಿದ ಫೋರ್ಡ್ ಕಾರು, ಅಷ್ಟಕ್ಕೂ ಏನಾಯ್ತು ಗೊತ್ತಾ ?

401

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಬಳಿ ಫೋರ್ಡ್ ಕಾರು ಹೊತ್ತಿ ಉರಿದ ಘಟನೆ ನಡೆದಿದೆ. ಸಖರಾಯಪಟ್ಟಣದ ಲೋಕೇಶ್ ಎಂಬುವರಿಗೆ ಸೇರಿದ ಕಾರು, ತರೀಕೆರೆಯಿಂದ ಸಖರಾಯಪಟ್ಟಕ್ಕೆ ಬರುವಾಗ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದು, ಬಾನೆಟ್ನಲ್ಲಿ ಹೊಗೆ ಕಂಡು ಕೆಳಗಿಳಿದ ಕೂಡಲೇ ಹೊತ್ತಿ ಉರಿದಿದೆ. ಕಡೂರು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರು.