ಚಿಕ್ಕಮಗಳೂರು:ಕಾಡಾನೆ ತುಳಿದು ರೈತನ ದುರ್ಮರಣ…

334
firstsuddi

ಚಿಕ್ಕಮಗಳೂರು : ಕಾಡಾನೆ ದಾಳಿಯಿಂದ ರೈತನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಪೇಟೆ ಸಮೀಪದ ಅರವಿಂದ ನಗರದಲ್ಲಿ ನಡೆದಿದೆ. ಕುಮಾರ್ (55) ಕಾಡಾನೆ ದಾಳಿಯಿಂದ ದಾಳಿಗೆ ಮೃತಪಟ್ಟ ರೈತ. ಇವರು ಹೊಲ ಕಾಯಲು ಹೋಗಿದ್ದು, ರಾತ್ರಿ ಹೊಲದಲ್ಲಿ ಮಲಗಿದ್ದ ಸಂದರ್ಭದಲ್ಲಿ ಕಾಡಾನೆ ತುಳಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದು, ನಿರಂತರ ಆನೆ ದಾಳಿ ಹಿನ್ನೆಲೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.