ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ…

455
firstsuddi

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ವಿದ್ಯುತ್ ದೀಪಾಲಂಕೃತ ಮೈಸೂರನ್ನು ನೋಡಿ ಖುಷಿಪಟ್ಟರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಕೃಷಿ ಸಚಿವರಾದ ಶಿವಶಂಕರ್ ರೆಡ್ಡಿ, ಮುಂತಾದ ಗಣ್ಯರು ಸಹ ಪ್ರಯಾಣಿಸಿದರು.