ಮಂಡ್ಯ: ಮಳವಳ್ಳಿಯಲ್ಲಿ ಆಯೋಜಿಸಿದ್ದ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿರವರು ಇಸ್ರೇಲ್ ಗೆ ಹೋದಾಗಲೇ ನಾನು ಸಾಯಬೇಕಿತ್ತು. ಆದರೆ ದೇವರ ಆಶೀರ್ವಾದದಿಂದ ಬದುಕಿ ಬಂದೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ನಾನೂ ಬದುಕಿರುವ ತನಕ ಜನರ ಸೇವೆಯನ್ನು ಮಾಡುತ್ತೇನೆ. ನನಗೆ ಹಣ ಮಾಡುವ ಉದ್ದೇಶವಿಲ್ಲ. ಜನರಿಗೆ ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ದೇವರು ನನಗೆ ಕೊಟ್ಟಿರುವ ಅಧಿಕಾರವನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸಿ ಪ್ರತಿಯೊಂದು ಕುಟುಂಬವನ್ನು ಯಾವ ರೀತಿ ಬದುಕಿಸುತ್ತೇನೆ ಎಂಬುದೇ ನನ್ನ ಮುಂದಿರುವ ಸವಾಲು ಎಂದಿದ್ದಾರೆ.










