ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತೆರಳುತ್ತಿದ್ದ ಕಾರಿಗೆ ಅಪಘಾತ…

435
firstsuddi

ಚಿಕ್ಕಮಗಳೂರು : ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯರವರ ಕಾರು ಅಪಘಾತಕ್ಕೀಡಾದ ಘಟನೆ ಮುಳ್ಳಯ್ಯನಗಿರಿ ಮಾರ್ಗದ ಚನ್ನಗೊಂಡನಹಳ್ಳಿ ತಿರುವಿನಲ್ಲಿ ನಡೆದಿದ್ದು, ಡಿಸಿ ಎಂ.ಕೆ.ಶ್ರೀರಂಗಯ್ಯ ಅವರು ದತ್ತಮಾಲಾ ಅಭಿಯಾನದ ಸಿದ್ಧತೆ ಪರಿಶೀಲನೆಗೆ ತೆರಳುತ್ತಿದ್ದಾಗ, ಪ್ರವಾಸಕ್ಕೆ ಬಂದಿದ್ದ ಹಾಸನ ಮೂಲದ ಪೊರ್ಡ್ ಐಕಾನ್ KA 04 Z 0560 ಕಾರು ಜಿಲ್ಲಾಧಿಕಾರಿಯವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಜಿಲ್ಲಾಧಿಕಾರಿಯವರ ಕಾರಿನ ಬಂಪರ್ ಇಂಡಿಕೇಟರ್ ಪುಡಿಯಾಗಿದೆ. ಅಪಾಯದಿಂದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಪಾರಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.