ಚಿಕ್ಕಮಗಳೂರು :ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನರ್ಸ್ ವೇಷದಲ್ಲಿ ಬಂದು ಮಗುವನ್ನು ಕದ್ದೊಯ್ದ ಖತರ್ನಾಕ್ ಮಹಿಳೆ…

643

ಚಿಕ್ಕಮಗಳೂರು: ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲೇ ಮಗು ಕಳ್ಳತನವಾಗಿವ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕಾಫಿನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅಸ್ಸಾಂ ಮೂಲದ ಸುನಿಲ್ ಹಾಗೂ ಅಂಜಲಿ ದಂಪತಿಯೇ ಮಗು ಕಳೆದುಕೊಂಡು ದುರ್ದೈವಿಗಳು. ಕಳೆದ ಆರು ವರ್ಷಗಳಿಂದ ಚಿಕ್ಕಮಗಳೂರಿನಲ್ಲೇ ವಾಸವಿದ್ದ ಅಸ್ಸಾಂ ಮೂಲದ ಸುನಿಲ್ ಕಳೆದ ವರ್ಷ ಅಸ್ಸಾಂ ಮೂಲದ ಅಂಜಲಿ ಎಂಬುವರನ್ನ ವಿವಾಹವಾಗಿದ್ರು. ಅವರಿಗೆ ಜನವರಿ 1ನೇ ತಾರೀಕು ಚಿಕ್ಕಮಗಳೂರು ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿತ್ತು. ಆದ್ರೆ, ನಾಲ್ಕು ದಿನದ ಮಗುವನ್ನ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದು ಮಹಿಳೆಯೊಬ್ಳು ಮಗುವನ್ನ ಎತ್ತಿಕೊಂಡು ಹೋಗಿದ್ದಾಳೆ. ಮಗುವನ್ನ ನರ್ಸ್ ಎತ್ತಿಕೊಂಡು ಹೋಗ್ತಿದ್ದಾರೆ. ತುಂಬಾ ಚಳಿ ಇದ್ದ ಕಾರಣ ಮಗುವಿಗೆ ದೇಹ ಬಿಸಿಯಾಗಲೆಂದು ಮೆಷಿನ್‍ನಲ್ಲಿ ಇಡ್ತಾರೆಂದು ಸುನಿಲ್ ದಂಪತಿ ಭಾವಿಸಿದ್ರು. ಆದ್ರೆ, ಅರ್ಧ ಗಂಟೆಯಾದ್ರು ನರ್ಸ್ ಮಗುವನ್ನ ಕರೆದುಕೊಂಡು ಬಾರದ ಹಿನ್ನೆಲೆ ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಆಗ ಆಸ್ಪತ್ರೆ ಹಾಗೂ ಸುತ್ತಮುತ್ತಾ ಹುಡುಕಾಟ ನಡೆಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಸಾಲದಕ್ಕೆ ಆಸ್ಪತ್ರೆಯಲ್ಲಿ ಸಿಸಿ ಟಿವಿಗಳಿದ್ರು ಕೂಡ ಅವು ಕೆಟ್ಟು ತಿಂಗಳೇ ಕಳೆದಿವೆ. ಇದೀಗ ಮಗುವನ್ನ ಕಳೆದಕೊಂಡು ದಂಪತಿ ಕಣ್ಣೀರಿಡ್ತಿದ್ದಾರೆ. ಜನವರಿ 1ರಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ 9 ಮಕ್ಕಳಲ್ಲಿ ಇದೊಂದೇ ಗಂಡು ಮಗುವಾಗಿತ್ತು.