ಚಿಕ್ಕಮಗಳೂರು : ಕೊರೊನಾ ಆತಂಕ-ಗ್ರಾಮದೊಳಗೆ ಯಾರು ಬರದಂತೆ 26 ದಿನದಿಂದ ಕಾವಲು ಕೂತ ಹಾದಿಕೆರೆ ಗ್ರಾಮದ ಯುವಕರು…

439
firstsuddi

ಚಿಕ್ಕಮಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದರಿಂದ ಆತಂಕಗೊಂಡ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಾದಿಕೆರೆ ಗ್ರಾಮದ ಗ್ರಾಮಸ್ಥರು ಕಳೆದ 26 ದಿನಗಳಿಂದ ದಿನಕ್ಕೆ 19 ಗಂಟೆ ಕಾಲ ಗ್ರಾಮದೊಳಗೆ ಯಾರೂ ಬರಬಾರದೆಂದು ಗ್ರಾಮದ ಧ್ವಾರಬಾಗಿಲಿನಲ್ಲಿ ಕಾವಲು ಕುಳಿತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆದರೆ ನೆಗೆಟಿವ್ ಇದ್ದ ಬೇರೆ ಜಿಲ್ಲೆಗಳಲ್ಲಿ ಏಕಾಏಕಿ 2-3 ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಆತಂಕಗೊಂಡ ಯುವಕರು ಗ್ರಾಮದ ಮುಂಭಾಗದಲ್ಲಿ ಟೋಲ್‍ಗೇಟ್ ನಿರ್ಮಿಸಿ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 1 ಗಂಟೆ ವರೆಗೂ ದಿನಕ್ಕೆ ಮೂರು ಶಿಫ್ಟ್ ನಂತೆ ಕಾವಲು ಕಾಯುತ್ತಿದ್ದಾರೆ. ಅಲ್ಲದೇ ಕದ್ದು ಮುಚ್ಚಿ ಗ್ರಾಮದೊಳಗೆ ಯಾರಾದರು ಪ್ರವೇಶಿಸಿದರೆ ಅವರ ವಿರುದ್ಧ ಗ್ರಾಮಸ್ಥರಿಂದ ಸೂಕ್ತ ಕ್ರಮ ಎಂದು ಬೋರ್ಡ್ ಹಾಕಿದ್ದಾರೆ.