ಚಿಕ್ಕಮಗಳೂರು : ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಆಹಾರ ಸೇರಿದಂತೆ ನೀಡಲಾಗುತ್ತಿರುವ ಸವಲತ್ತುಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಸಲಹೆ ನೀಡಿದರು. ರಾಮನಹಳ್ಳಿಯ ಮುಸ್ಲಿಂ ಸಮುದಾಯದ ಸೇಹಿತರ ಬಳಗ ನೀಡಿದ ತರಕಾರಿ ಕಿಟ್‍ಗಳನ್ನು ನಗರದ ವಿವಿಧೆಡೆ ವಿತರಿಸಿ ಅವರು ಮಾತನಾಡಿದರು.
ಲಾಕ್‍ಡೌನ್‍ನಿಂದಾಗಿ ಬಡವರು ಕೂಲಿಕಾರ್ಮಿಕರು ಮದ್ಯಮವರ್ಗದವರ ಸ್ಥಿತಿ ಶೋಚನೀಯವಾಗಿದೆ, ಅಂದೇ ದುಡಿದು ಅಂದೇ ತಿನ್ನುವವರು ಮತ್ತು ನಿರಾಶ್ರಿತರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ ಎಂದರು.
ಬಡವರು ನಿರಾಶ್ರಿತರು ಮತ್ತು ಕೂಲಿ ಕಾರ್ಮಿಕರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಅವರಿಗೆ ಆಹಾರ ಸೇರಿದಂತೆ ಹಲವು ರೀತಿಯ ಸವಲತ್ತುಗಳನ್ನು ನೀಡುತ್ತಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಈ ವೇಳೆ ರಾಮನಹಳ್ಳಿ, ಆಲೇನಾಹಳ್ಳಿ, ಗೌರಿಕಾಲುವೆ, ಉಪ್ಪಳ್ಳಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ತರಕಾರಿಗಳನ್ನು ವಿತರಿಸಲಾಯಿತು. ಅಪ್ಸರ್ ಅಹಮದ್, ಅಕ್ಮಲ್ ಹಾಜಿರಾ, ಸಲೀಮ್ ಅಹಮದ್, ಗೌಸ್ ಮುನೀರ್, ಅಜ್ಮತ್ ಪಾಷ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಆಹಾರ ಸೇರಿದಂತೆ ನೀಡಲಾಗುತ್ತಿರುವ ಸವಲತ್ತುಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು...










