ಚಿಕ್ಕಮಗಳೂರು: ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಎಂ.ಪೂರ್ಣೇಶ್ ಆಯ್ಕೆ.

240
ಚಿಕ್ಕಮಗಳೂರು: ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಎಂ ಪೂರ್ಣೆಶ್ ಆಯ್ಕೆ
ಚಿಕ್ಕಮಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಮೂಡಿಗೆರೆ ತಾಲ್ಲೂಕಿನ ಮತ್ತಿಕಟ್ಟೆಯ ಸಹಿಪ್ರಾ ಶಾಲೆಯ ಶಿಕ್ಷಕ ಎಂ.ಎಂ ಪೂರ್ಣೇಶ್ ಆಯ್ಕೆಯಾಗಿದ್ದಾರೆ.
2019-2024ನೇ ಸಾಲಿನ ಅವಧಿಗೆ ಉಪಾಧ್ಯಕ್ಷರಾಗಿ ಎಂ.ಎಂ ಪೂರ್ಣೇಶ್ ಅವರನ್ನು ನಾಮ ನಿರ್ದೇಶನಗೊಳಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಚಿಕ್ಕಮಗಳೂರು ಜಿಲ್ಲಾ ಶಾಖೆಯ ಅಧ್ಯಕ್ಷ ದೇವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.