ಚಿಕ್ಕಮಗಳೂರು :ಕರೋನವಿಲ್ಲ, ವೈದ್ಯಕೀಯ ವರದಿಯಲ್ಲಿ ಸಾಬೀತು, ಕಾಫಿನಾಡಿಗರು ನಿರಾಳ…

1613
firstsuddi

ಚಿಕ್ಕಮಗಳೂರು: ವಿಪರೀತ ಕೆಮ್ಮು-ಶೀಥ ಹಾಗೂ ಜ್ವರದಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕರೋನ ಸೋಂಕಿಲ್ಲ ಎಂಬುದು ಪರೀಕ್ಷೆಯಿಂದ ಸಾಬೀತಾಗಿದ್ದು, ಆ ವ್ಯಕ್ತಿಗೆ ಸೋಂಕಿಲ್ಲ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಕೂಡ ಸ್ಪಷ್ಟಪಡಿಸಿದ್ದಾರೆ. 15 ದಿನಗಳ ಹಿಂದೆ ಕುವಯತ್‍ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆನಾಲ್ಕೈದು ದಿನಗಳಿಂದ ವಿಪರೀತವಾದ ಶೀಥ-ಕೆಮ್ಮು ಹಾಗೂ ಜ್ವರವಿತ್ತು. ಎರಡು ದಿನಗಳ ಹಿಂದೆ ಮೂಡಿಗೆರೆ ಸಮೀಪದ  ಕಣಚೂರು  ಗ್ರಾಮಕೆ  ತಂಗಿ ಮನೆಗೆ ಬಂದಾಗ ಕೆಮ್ಮು-ಜ್ವರ ಹೆಚ್ಚಾದ ಕಾರಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯ ಹೆರಿಗೆ ಆಸ್ಪತ್ರೆಯ ಐಸೋಲೇಷನ್ ವಿಭಾಗದಲ್ಲಿ ಆ ವ್ಯಕ್ತಿಗೆ ತೀವ್ರ ನಿಗಾ ಘಟಕದಲ್ಲಿಟ್ಟು, ಚಿಕಿತ್ಸೆ ನೀಡಲಾಗ್ತಿತ್ತು. ಆತನ ರಕ್ತದ ಮಾದರಿಯನ್ನ ಪರೀಕ್ಷೆಗೆಂದು ಹಾಸನಕ್ಕೆ ಕಳಿಸಲಾಗಿತ್ತು. ಇಂದು ರಕ್ತದ ಮಾದರಿಯ ವರದಿ ಬಂದಿದ್ದು ಆ ವ್ಯಕ್ತಿಗೆ ಕರೋನ ಸೋಂಕಿಲ್ಲ ಎಂಬುದು ಸಾಬೀತಾಗಿದೆ. ಇದರಿಂದ ಕಾಫಿನಾಡಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.