ಚಿಕ್ಕಮಗಳೂರು : ಕೊರೋನಾ ವೈರಸ್ಗೆ ನಾಗರೀಕರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞ ಡಾ|| ಜೆ.ಪಿ.ಕೃಷ್ಣೇಗೌಡ ಹೇಳಿದರು.
ಜಿಲ್ಲಾ ಕಸಾಪ ವತಿಯಿಂದ ನಗರದ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಬಿ.ಎಲ್.ಶರ್ಮಿಳಾ ಲಕ್ಷ್ಮಣಗೌಡ ಮತ್ತು ಬಿ.ಎಸ್.ಶಮಂತ್ ಸದಾಶಿವಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಮತ್ತು ಅಮೇರಿಕಾದ ಮೇಲೆ ದಾಳಿ ನಡೆಸಲು ಚೀನಾ ದೇಶದವರು ಅಲ್ಲಿನ ಪ್ರಯೋಗಶಾಲೆಯಲ್ಲಿ ತಯಾರಿಸಿಟ್ಟಿದ್ದ “ಬಯೋವಾರ್” ಎಂಬ ಕ್ರಿಮಿಗಳು ಲ್ಯಾಬ್ನಿಂದ ಸೋರಿಕೆಯಾಗಿದ್ದರಿಂದಾಗಿ ಕೊರೋನಾ ವೈರಸ್ ಬಂದಿದೆ, ಅದು ಚೀನಾದವರಿಗೇ ತಿರುಗು ಬಾಣವಾಗಿದೆ ಎಂದು ವಿಶ್ಲೇಷಿಸಿದರು.
ಕಣ್ಣಿಗೆ ಕಾಣದ ಕೊರೋನಾ ವೈರಸ್ ಇಂದು ಜಗತ್ತನ್ನು ನಡುಗಿಸುತ್ತಿದೆ, ಇದಕ್ಕೂ ಹೆಚ್.1 ಎನ್.1 ಗೂ ಯಾವುದೇ ಸಂಬಂಧವಿಲ್ಲ, ಕೊರೋನಾ ವೈರಸ್ ಗಾಳಿಯಲ್ಲಿ ಸೋಂಕಿನಿಂದ ಬರುವ ಅಂಟುರೋಗ, ಅದು ಮನುಷ್ಯರಿಂದ ಮಾತ್ರ ಹರಡುತ್ತದೆ ಎಂದರು.
ಕೊರೋನಾ ವೈರಸ್ ಪ್ರಾಣಿಗಳಿಂದ ಮತ್ತು ಆಹಾರ ಪದಾರ್ಥಗಳಿಂದ ಬರುವುದಿಲ,್ಲ ಸಸ್ಯಾಹಾರ ಅಥವಾ ಮಾಂಸಾಹಾರವನ್ನು ಬೇಯಿಸಿ ತಯಾರಿಸುವುದರಿಂದ ನಾಗರೀಕರು ಅದನ್ನು ಧಾರಾಳವಾಗಿ ಸೇವಿಸಬಹುದು ಆದರೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಮಾತನಾಡಿ ಸ್ವಚ್ಚತೆ ಮತ್ತು ಜಾಗೃತಿಯಿಂದ ಯಾವುದೇ ರೋಗಗಳು ಬರದಂತೆ ಬದುಕಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಮಕ್ಕಳ ಮನೋವಿಕಾಸ ಮತ್ತು ಮಕ್ಕಳ ಸಾಹಿತ್ಯ ವಿಷಯ ಕುರಿತು ಲೇಖಕ ಸಂಪತ್ ಬೆಟ್ಟಗೆರೆ ಉಪನ್ಯಾಸ ನೀಡಿದರು, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಪ್ಪಗೌಡ, ಕಾಲೇಜಿನ ಉಪಪ್ರಾಂಶುಪಾಲೆ ಶೃತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕೊರೋನಾ ವೈರಸ್ಗೆ ನಾಗರೀಕರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ : ಡಾ|| ಜೆ.ಪಿ.ಕೃಷ್ಣೇಗೌಡ.










