ಚಿಕ್ಕಮಗಳೂರು:ಕಲ್ಲಿನಿಂದ ಜಜ್ಜಿ ನವಜಾತ ಶಿಶು ಹತ್ಯೆ…

575
firstsuddi

ಚಿಕ್ಕಮಗಳೂರು : ನವಜಾತ ಶಿಶುವನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ನಗರದ ಹಳೇ ತಾಲೂಕು ಕಛೇರಿ ಬಳಿ ನಡೆದಿದೆ. ಒಂದು ದಿನದ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಕಂಡು ಪೊಲೀಸರು ಹಾಗೂ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.