ಸಂಸ್ಕೃತಿ ವಿಕಸನವಾಗದ ದೇಶದಲ್ಲಿ ನಾಗರೀಕತೆ ಬೆಳೆಯಲು ಸಾಧ್ಯವಿಲ್ಲ : ಸಿ.ಟಿ.ರವಿ…

294
firstsuddi

ಯಾವೊಂದು ರಾಷ್ಟ್ರದಲ್ಲಿ ಕಲೆ ಸಂಸ್ಕೃತಿ ವಿಕಸನ ವಾಗುವುದಿಲ್ಲವೋ ಅಂತಹ ದೇಶದಲ್ಲಿ ನಾಗರೀಕತೆ ಬೆಳೆಯಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಜಿಲ್ಲಾಡಳಿತ,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವಚೇತನ ಯುವಕ ಸಂಘ ಹಿರೇಮಗಳೂರಿನಲ್ಲಿ ಆಯೋಜನೆ ಮಾಡಿದ್ದ ಜಿಲ್ಲಾಯುವಜನ ಮೇಳ ಮತ್ತು ಜಿಲ್ಲಾ ಯುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿರುವ ಸಾವಿರಾರು ಬಗೆಯ ಕಲೆ ಇಲ್ಲಿನ ಸಂಸ್ಕøತದ ಶ್ರೀಮಂತಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ.ಹಾಗೆಯೇ ಎಲ್ಲಿ ವಿಜ್ಞಾನ ವಿರುವುದಿಲ್ಲವೊ ಆ ಸಮಾಜ ಜಡ್ಡುಗಟ್ಟಿದ ಸಮಾಜವಾಗುತ್ತದೆ.ಸಹಸ್ರಾರು ವರ್ಷಗಳಕಾಲ ಜಗತ್ತಿಗೆ ಮಾರ್ಗದರ್ಶನ ಮಾಡಿದ ಭಾರತ ಪರಕೀಯರ ಆಕ್ರಮಣದ ಕಾಲಗಟ್ಟದಲ್ಲಿ ವಿಜ್ಞಾನ,ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹವಿಲ್ಲದೆ ನಶಿಸಿಹೋಗುತ್ತಿದ್ದ ಸಂದರ್ಭದಲ್ಲಿ ತನ್ನ ತನವನ್ನು ಕಳೆದುಕೊಂಡು ಮೌಡ್ಯಾಚರಣೆಯ ಅಂಧಕಾರದಲ್ಲಿ ಮುಳುಗಿದ್ದ ಕೆಟ್ಟಕಾಲದಲ್ಲಿ ಸೂರ್ಯನಾಗಿ ನಿಜ ಧರ್ಮವನ್ನು ಜಗತ್ತಿಗೆ ಎತಿಹಿಡಿದು ಜಾತಿಯತೆ ಅಸ್ಪøಶ್ಯತೆ ವಿರುದ್ದ ಗುಡುಗಿ ಭಾರತೀಯರಿಗೆ ಕರೆಯನ್ನು ಕೊಟ್ಟವರು ಸ್ವಾಮಿ ವಿವೇಕಾನಂದರು ಎಂದರು.
ಸೆ11 ರ 1893 ಭಾರತದ ಸಾಂಸ್ಕøತಿಕ ಹಿರಿಮೆಯನ್ನು ಜಗತ್ತಿನ ಉದ್ದಗಲಕ್ಕೂ ಎತ್ತಿ ಹಿಡಿಯುವಂತ ಕೆಲಸವನ್ನು ವಿವೇಕಾನಂದರು ಮಾಡಿದರು.ಎಲ್ಲ ಧರ್ಮದ ಧಾರ್ಮಿಕ ಪ್ರಮುಖರು ತಮ್ಮದೆ ಧರ್ಮ ಶ್ರೇಷ್ಠ ಎಂದು ತಮ್ಮ ಶ್ರೇಷ್ಠತೆಯನ್ನು ಇನ್ನೊಂದು ಮತ ಧರ್ಮವನ್ನು ಅಲ್ಲೆಗೆಳೆದು ಹೇಳುತ್ತಿದ್ದಂತ ಆವೊಂದು ಧಾರ್ಮಿಕ ಸಂಸತ್‍ನಲ್ಲಿ,ಎಲ್ಲಾ ಧರ್ಮಗಳ ಶ್ರೇಷ್ಠತೆಯ ಸಾರ ಹಿಂದೂ
ಧರ್ಮದಲ್ಲಿ ಅಡಗಿದೆ ಎಲ್ಲಾ ಧರ್ಮಗಳು ಶ್ರೇಷ್ಟವೆ ಎಂದು ಶ್ರೇಷ್ಠತೆಯನ್ನು ಎತ್ತಿಹಿಡಿದು ಭಾರತ ಹೇಗೆ ಧರ್ಮವನ್ನು ನೋಡುತ್ತದೆ ಎಂಬ ವಿಚಾರದ ಹಿರಿಮೆಯನ್ನು ಜಗತ್ತಿಗೆ ತಿಳಿಸಿಕೊಟ್ಟವರು ವಿವೇಕಾನಂದ ಎಂದು ಬಣ್ಣಿಸಿದರು.
ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ,ಭಾರತ ಎಂದರೆ ಆದರ್ಶ,ಗೌರವಾನ್ವಿತ,ಆಧ್ಯಾತ್ಮ,ಮೃತ್ಯುಂಜಯ ಹಾಗೂ ಧರ್ಮಶಕ್ತರಾಷ್ಟ ಎಂದು (ಇಂಡಿಯಾದ ಫುಲ್‍ಫಾಂ )ಇಂಡಿಯಾದ ಪೂರ್ಣಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಮಾತು ಆರಂಬಿಸಿದ ಅವರು ಸರ್ವೆಜನ ಸುಖಿನೋಭವಂತೂ ಅನ್ನುವ ದೇಶ ನಮ್ಮದು ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.ಹಾಗಾಗಿ ನಮ್ಮದೇಶ,ನಮ್ಮ ಸಮಾಜ, ಸಂಸ್ಕøತಿಯನ್ನು ಎತ್ತಿ ಹಿಡಿಯುವಹಾಗೆ ಯುವಕ-ಯುವತಿಯರು ದೇಶಪ್ರೇಮವನ್ನು ರೂಡಿಸಿಕೊಳ್ಳೋಣ.ವಿವೇಕ ವಾಣಿಯಂತೆ ಯುವಸಮೂಹ ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ನಿಲ್ಲದಿರಿ ಎನ್ನೋಣ ಎಂದು ನಮ್ಮ ದೇಶದ ಸಂಸ್ಕøತಿಯನ್ನು ಹೂವಿನಹಾಗೆ ಅರಳಿಸಿ ನಾವೆಲ್ಲರೂ ನರೇಂದ್ರರ ಹೆಸರನ್ನು ಎತ್ತಿಹಿಡಿಯೋಣ ಎಂದರು.
ನವಚೇತನ ಯುವಕ ಸಂಘದ ಅಧ್ಯಕ್ಷ ಬಿ.ರೇವನಾಥ್ ಮಾತನಾಡಿ,ಕಳೆದ ಹತ್ತು ವರ್ಷಗಳ ಹಿಂದೆ ಇದೆ ಇತಿಹಾಸ ಪ್ರಸಿದ್ದ ಹಿರೇಮಗಳೂರಿನಲ್ಲಿ ಜಿಲ್ಲಾ ಯುವಜನೋತ್ಸವ ಮಾಡಿ ಹಲವು ಪ್ರತಿಭೆಯನ್ನು ಪ್ರೋತ್ಸಾಹಿಸಲಾಗಿತ್ತು.ಜಿಲ್ಲೆಯಾದ್ಯಂತ ನೂರಾರು ಕಲಾವಿದರು ಇಂದು ಬಂದಿದ್ದಾರೆ.ತಮ್ಮೊಳಗಿರುವ ಸುಪ್ತಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಹಾಗೂ ರಷ್ಟ್ರಮಟ್ಟಕ್ಕೆ ಬೆಳೆಯಲು ಈ ವೇದಿಕೆ ಸಹಕಾರಿಯಾಗಲಿ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಕಲಾ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜನರ ಗಮನ ಸೆಳೆದರು.
ರಾಜ್ಯಪ್ರಶಸ್ತಿ ವಿಜೇತ ಹರೀಶ್ ಕೊಪ್ಪ,ನಗರಸಭೆ ಅಧ್ಯಕ್ಷೆ ಶಿಲ್ಪರಾಜಶೇಖರ್,ಶ್ರೀದೇವಿ ಮೋಹನ್,ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ಧೆಶಕಿ ಮಂಜುಳಾ ಹುಲ್ಲಳ್ಳಿ,ನಗರಸಭೆ ಮಾಜಿ ಸದಸ್ಯ ಜಗದೀಶ್,ವಾಲಿಬಾಲ್ ತರಬೇತುದಾರರಾದ ವಿನುತಾ,ಸಂತೋಷ್,ಶಿವಕುಮಾರ್ ಇತರರು ಹಾಜರಿದ್ದರು.