ಚಿಕ್ಕಮಗಳೂರು : ಮಂಡ್ಯ ಬಸ್ ದುರಂತದಿಂದ ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು ಅಲರ್ಟ್ ಆಗಿದ್ದು, ಆರ್ ಟಿ ಓ ಅಧಿಕಾರಿ ಮುರುಗೇಂದ್ರ ಅವರು ಜಿಲ್ಲೆಯ ಏಳು ಬಸ್ ಮಾಲೀಕರಿಗೆ ನೋಟೀಸ್ ನೀಡಿದ್ದು, 15 ವರ್ಷ ಮೀರಿದ ಖಾಸಗಿ ಬಸ್ ಗಳು ರಸ್ತೆಗೆ ಇಳಿಯದಂತೆ ನೋಟೀಸ್ ನೀಡಲಾಗಿದೆ. 15 ವರ್ಷ ಮೀರಿದ ಖಾಸಗಿ ಬಸ್ ಗಳು ರಸ್ತೆಯಲ್ಲಿ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಖಾಸಗಿ ಬಸ್ ಗಳಿಗೆ ನೀಡಿರೋ ನೋಟೀಸ್ ಪ್ರತಿ ಫಸ್ಟ್ ಸುದ್ದಿಗೆ ಲಭ್ಯವಾಗಿದೆ.










