ಚಿಕ್ಕಮಗಳೂರು : ದೇವೇಗೌಡರ ಕುಟುಂಬ ಗೌಡರನ್ನು ಜಿಪಿಎ ಮಾಡಿಕೊಂಡಿದ್ದಾರಾ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಆ ರೀತಿ ಊಹೆ ಮಾಡಿಕೊಂಡ್ರೆ ನಾವು ಏನು ಮಾಡಲಿ.ಅವರ ಮಾತು ಸಿಲ್ಲಿ ವಿಚಾರ. ನಾವು ಜನಗಳ ಕಷ್ಟ ಸುಖಗಳಿಗೆ ಭಾಗಿಯಾಗಿದ್ದೇವೆ. ಜನರ ಪ್ರೀತಿ ವಿಶ್ವಾಸ ದಿಂದ ಈ ಕುಟುಂಬ ಇಲ್ಲಿಯ ವರೆಗೆ ಬದುಕಿ ಬಂದಿದೆ. ಅವರು ಅಸೂಹೆಯಿಂದ ಈ ರೀತಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ರಿಮೋಟ್ ಬೇರೆಯವರ ಕೈಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ನಾನು ರಾಜ್ಯದ ಸಮಸ್ಯೆಗಳ ಬಗ್ಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ರೆಡಿ ಮಾಡಿಕೊಂಡಿದ್ದೇನೆ. ಈ ಕಾರಣಕ್ಕಾಗಿ ನಮ್ಮ ಸ್ನೇಹಿತರು ನನ್ನನ್ನು ರಿಮೋಟ್ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿಗಳು ಹೇಳಿರುವುದರಲ್ಲಿ ತಪ್ಪೇನಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ರೈತರಿಗೆ ನಾನು ಏನು ಮಾಡಿದ್ದೇನೆ. ಮೋದಿ ಕಳೆದ ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಚರ್ಚೆಗೆ ಬರಲಿ. ಮೋದಿಯ ಸಂತೆ ಭಾಷಣಕ್ಕೆ ನಾನು ಏಕೆ ಉತ್ತರ ಕೊಡಬೇಕು.ರೈತರ ಸಾಲಮನ್ನಾ ಮಾಡಿದ್ದಕ್ಕೆ ಮೈತ್ರಿ ಸರ್ಕಾರ ರೈತ ವಿರೋಧಿ ಸರ್ಕಾರವೇ? ಹಾಗಾದ್ರೆ ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಅಂತಾ ಎಂದ ಮೋದಿ ರೈತರ ಪರವಾ? ಈ ಬಗ್ಗೆ ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಇಂದು ಶೃಂಗೇರಿಗೆ ಭೇಟಿ ನೀಡಿರುವ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು ಇಂದಿನ ಭೇಟಿಯಲ್ಲಿ ವಿಶೇಷ ಏನು ಇಲ್ಲ.
ಹಲವಾರು ಬಾರಿ ಶೃಂಗೇರಿಗೆ ಭೇಟಿ ನೀಡಿದ್ದೇನೆ. ತಾಯಿಯ ಆರ್ಶೀವಾದದಿಂದ ಸರ್ಕಾರ ನಡೆಯುತ್ತಿದೆ. ನಿಖಿಲ್ ರಾಜಕೀಯ ವಿಚಾರಕ್ಕೂ ಈ ಭೇಟಿಗೂ ಸಂಬಂಧ ಇಲ್ಲ. ನಮ್ಮ ಕುಟುಂಬ ಮೊದಲಿನಿಂದಲೂ ತಾಯಿಯ ಆರ್ಶಿವಾದ ಪಡೆದು ಒಳ್ಳೆಯ ಕೆಲಸಕ್ಕೆ ಕೈ ಹಾಕುತ್ತಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಎಂಬ ಕಾರಣಕ್ಕೆ ಇಂದು ತಾಯಿಯ ಆರ್ಶಿವಾದ ಪಡೆಯಲು ಬಂದಿದ್ದೇವೆ ಎಂದರು.










