ಮೂಡಿಗೆರೆ- ಮಲೆನಾಡಿನಲ್ಲಿ ಮುಂದುವರೆದ ಅಶ್ಲೇಷ ಮಳೆ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನ್ನಾಪುರ- ಚಿನ್ನಿಗ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದು ಬಿದ್ದಿದ್ದು, ಈ ಕೊಠಡಿಯಲ್ಲಿ ದಿನ 30 ಮಕ್ಕಳು ತರಗತಿಯಲ್ಲಿ ಇರುತ್ತಿದ್ದು, ಇಂದು ಭಾರಿ ಮಳೆ ಹಿನ್ನಲೆ ಶಾಲೆಗೆ ರಜೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದ್ದು, ಇದೇ ಕೊಠಡಿಯಲ್ಲಿ ನಾಳೆ ಸ್ವಾತಂತ್ಯ ದಿನಾಚರಣೆಗೆ ಸಿದ್ದತೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.