ಬೆಂಗಳೂರು : ಆಪರೇಷನ್ ಕಮಲ ಮಾಡಲ್ಲ, ಅಧಿವೇಶನಕ್ಕೂ ಅಡ್ಡಿಪಡಿಸೊಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅಧಿವೇಶನ ಆರಂಭದಲ್ಲೇ ಗಲಾಟೆ ಆರಂಭಿಸುವ ಮೂಲಕ ಜನದ್ರೋಹಿಯಾಗಿದ್ದಾರೆ. ಬಿಜೆಪಿ ಶಾಸಕರು ಗದ್ದಲದಿಂದ ರಾಜ್ಯಪಾಲರಿಗೂ, ಸದನಕ್ಕೂ ಅಗೌರವವನ್ನು ತೋರಿದ್ದಾರೆ.ಇದು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯ ಹತಾಶ ಮನಃಸ್ಥಿತಿಯ ಪ್ರತೀಕವಾಗಿದೆ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.











