ಬೆಂಗಳೂರು: ಶಾಸಕ ಸಿ.ಟಿ.ರವಿ ಅವರ ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಬಿಜೆಪಿ ಶಾಸಕ ಸಿಟಿ ರವಿಯ ಕಾರು ಅಪಘಾತದಿಂದ ಇಬ್ಬರ ದುರ್ಮರಣವಾಗಿದೆ. ಘಟನೆಯ ಬಗ್ಗೆ ಮೃತರ ಸ್ನೇಹಿತರು ಮಾಡಿದ ವಿಡಿಯೋ, ಮಾಧ್ಯಮಗಳ ವರದಿಯು ಸಿಟಿ ರವಿ ಕುಡಿದಿದ್ದರು ಎನ್ನಲಾಗಿದೆ. ಎಫ್ಐಆರ್ ನಲ್ಲಿ ರವಿ ಹೆಸರು ಇಲ್ಲದಿರುವುದು ಅನುಮಾನ ಮೂಡಿಸಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.











