ಬೆಂಗಳೂರು: ಮೋದಿಯವರ ತೊಘಲಕ್ ನೀತಿಗಳು, ನೋಟು ರದ್ದತಿ, ಜಿಡಿಪಿ ಕುಸಿತ, ಜಿಎಸ್ಟಿ ಅನುಷ್ಠಾನ ಹೂಡಿಕೆದಾರರಲ್ಲಿ ಅಪನಂಬಿಕೆ ಮೂಡಿಸಿ ಎಫ್ ಡಿಐ ತೀವ್ರ ಕುಸಿತ ಕಂಡಿದೆ.ಕರ್ನಾಟಕವು 2018–19 ಏಪ್ರಿಲ್- ಸೆಪ್ಟೆಂಬರ್ ವರೆಗೆ 17,500 ಕೋಟಿ ಹೂಡಿಕೆಯಿಂದ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಆಂಧ್ರ, ಮಹಾರಾಷ್ಟ್ರ ಕೂಡ ಹೂಡಿಕೆಯಲ್ಲಿ ತೀವ್ರ ಇಳಿಕೆ ಕಂಡಿವೆ.
ಕೇಂದ್ರವು ರಫೇಲ್ ಒಪ್ಪಂದಕ್ಕೆ ಸಹಿ ಹಾಕುವ 10 ದಿನ ಮೊದಲೇ ಅನಿಲ್ ಅಂಬಾನಿ ಪ್ರೆಂಚ್ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಪ್ರಸ್ತುತ ಬಿಡುಗಡೆಯಾದ ಇಮೇಲ್ ನಿಂದ ಸತ್ಯ ಬಹಿರಂಗ.ಒಪ್ಪಂದಕ್ಕೆ ಮೊದಲೇ ಅಂಬಾನಿಗೆ ಈ ವಿಚಾರ ತಿಳಿದಿದ್ದು ಹೇಗೆ? ಈ ವಿಷಯದಲ್ಲಿ ಮೋದಿ, ಅಂಬಾನಿ ಮಧ್ಯವರ್ತಿಯಂತೆ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.












