ಅನಂತ್​ ಕುಮಾರ್​  ಅವರು ನಿರ್ವಹಿಸುತ್ತಿದ್ದ  ರಸಗೊಬ್ಬರ ಖಾತೆ ಸದಾನಂದ ಗೌಡರಿಗೆ ಹಂಚಿಕೆ…

234
firstsuddi

ನವದೆಹಲಿ: ಅನಾರೋಗ್ಯ ಕಾರಣದಿಂದ ಅಕಾಲಿಕ ಮರಣ ಹೊಂದಿದ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದ ರಾಸಾಯನಿಕ, ರಸಗೊಬ್ಬರ ಖಾತೆಯನ್ನು ಮರು  ಹಂಚಿಕೆ ಮಾಡಲಾಗಿದ್ದು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ  ಅವರಿಗೆ ರಾಸಾಯನಿಕ, ರಸಗೊಬ್ಬರ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರಿಗೆ  ಸಂಸದೀಯ ವ್ಯವಹಾರಗಳ ಖಾತೆ ಹೆಚ್ಚುವರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೆ ಮಾಡಿದ್ದಾರೆ.