ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ನೂತನ ಮೇಯರ್ ಆಗಿ ದಿವಾಕರ, ಉಪಮೇಯರ್ ಆಗಿ ವೇದಾವತಿ ಆಯ್ಕೆ…

155
firstsuddi

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 21ನೇ ಅವಧಿಗೆ ನೂತನ ಮೇಯರ್ ಆಗಿ 46ನೇ ಕಂಟೋನ್ಮೆಂಟ್ ವಾರ್ಡ್‌ನ ಬಿಜೆಪಿಯ ದಿವಾಕರ ಪಾಂಡೇಶ್ವರ ಚುನಾಯಿತರಾಗಿದ್ದಾರೆ ಮತ್ತು ಉಪ ಮೇಯರ್ ಆಗಿ ಅದೇ ಪಕ್ಷದ 9ನೇ ಕುಳಾಯಿ ವಾರ್ಡ್‌ನ ಕಾರ್ಪೊರೇಟರ್ ವೇದಾವತಿ ಚುನಾಯಿತರಾಗಿದ್ದಾರೆ. ಇಂದು ಪೂರ್ವಾಹ್ನ ಪ್ರಥಮವಾಗಿ ಪಾಲಿಕೆಗೆ ಹೊಸದಾಗಿ ಆಯ್ಕೆಯಾದ 60 ಕಾರ್ಪೊರೇಟರ್‌ಗಳ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪಾಲಿಕೆ ನೂತನ ಪರಿಷತ್ ಅಸ್ತಿತ್ವಕ್ಕೆ ಬಂತು. ಆನಂತರ ಚುನಾವಣಾಧಿಕಾರಿ, ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ. ಯಶವಂತ್ ನೇತೃತ್ವದಲ್ಲಿ ಮೇಯರ್- ಉಪಮೇಯರ್ ಚುನಾವಣೆ ನಡೆಯಿತು.