ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು-ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಸಂಕಷ್ಠಕ್ಕೆ ಸಿಲುಕಿದ ಯತ್ನಾಳ್.

423
firstsuddi

ಚಿತ್ರದುರ್ಗ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗಾ ಮತ್ತೆ ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಮೊದಲು ಯತ್ನಾಳ್ ಅವರ ದೊರೆಸ್ವಾಮಿ ಅವರು ಪಾಕ್ ಏಜೆಂಟ್ ಎಂಬ ಹೇಳಿಕೆಯನ್ನು ಖಂಡಿಸಿ ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ ಎಂದ ಸಾಣೇಹಳ್ಳಿ ಶ್ರೀ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು. ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿ ಅವರು ಲಾಠಿ ಏಟು ತಿಂದಿದ್ದಾರಾ? ಅವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿರಬಹುದು ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮೊದಲು ಕ್ಷಮೆಕೋರಲಿ. ರಾತ್ರಿ ಒಂದು, ಬೆಳಿಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ ಎಂದರು.
ಬಳಿಕ ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಯಿಸಿದ್ದು, ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕುಮಾರಸ್ವಾಮಿ ಹುಟ್ಟಿದ್ದರಾ? ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದ ಅವರಿಗೆ ನಾಚಿಕೆ ಆಗಬೇಕು. ಹಾಗಾದರೆ ನೀವು ಯಾಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.