ಹರಿಯಾಣ- ಮಹಿಳೆಯೊಬ್ಬಳು 2007 ರಲ್ಲಿ ಬಿಹಾರ ನಿವಾಸಿಯನ್ನು ಮದುವೆಯಾಗಿದ್ದಳು.ಆದರೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ತನ್ನ ಪತಿ ಒತ್ತಾಯ ಮಾಡುತ್ತಾರೆ ಎಂದು ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದರು. ಮಹಿಳೆ ಮಾಡಿದ ಆರೋಪಕ್ಕೆ ಯಾವುದೇ ಸೂಕ್ತ ದಾಖಲೆಗಳು ಇಲ್ಲ ಎಂದು ಸ್ಥಳೀಯ ಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಮತ್ತೆ ಮಹಿಳೆ ಹರಿಯಾಣ ಹೈ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಹರಿಪಾಲ್ವರ್ಮ ವಿಭಾಗೀಯ ಪೀಠ ಸ್ಥಳೀಯ ನ್ಯಾಯಲಯ ಮನವಿಯನ್ನು ವಜಾ ಮಾಡಿರುವುದು ಸರಿಯಲ್ಲ, ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದರೆ ವಿಚ್ಛೇದನ ಕೇಳಬಹುದು ಎಂದು ಹೇಳಿದೆ.