ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಇಬ್ಬರು ನಿರುದ್ಯೋಗಿಗಳು, ರೈತರೇ ಎಚ್ಚರವಾಗಿರಿ-ಆರ್.ಅಶೋಕ್.

145
firstsuddi

ಬೆಂಗಳೂರು : ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಇಬ್ಬರು ನಿರುದ್ಯೋಗಿಗಳು ರೈತರೇ ಎಚ್ಚರವಾಗಿರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್ ಪಿತೂರಿ ಮಾಡುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ನಾವು ಮುಚ್ಚುಮರೆಯಿಲ್ಲದೆ ಜಾರಿಗೆ ತರುತ್ತೇವೆ. ಭೂ ಸುಧಾರಣೆ ಕಾಯ್ದೆಯಲ್ಲಿ ಮೂರು ಎಕರೆ ಕೊಂಡುಕೊಳ್ಳಲು ಅವಕಾಶವಿದೆ. ಇದನ್ನು ಯಾವ ಬಹುರಾಷ್ಟ್ರೀಯ ಕಂಪನಿಗಳಾಗಲಿ ಅಥವಾ ದೊಡ್ಡ ಕುಳಗಳಾಗಲಿ ಬರುವುದಿಲ್ಲ. ದಲಿತರ ಜಮೀನನ್ನು ಬೇರೆ ಯಾರಿಗೂ ಕೊಂಡುಕೊಳ್ಳಲು ಅವಕಾಶವಿಲ್ಲ ಉಳುವವನೆ ಭೂಮಿಯ ಒಡೆಯ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಸುಖಾಸುಮ್ಮನೆ ಸಿದ್ದರಾಮಯ್ಯ ಅವರು ರೈತರ ದಾರಿ ತಪ್ಪಿಸುವುದು ಬೇಡ ಈ ಕಾಯ್ದೆಯ ಪ್ರಕಾರ ರೈತ ತನ್ನದೇ ಆದ ಜಮೀನನ್ನು ಮಾರಟ ಮಾಡುವ ಹಾಗಿರಲಿಲ್ಲ. ಆದರೆ ಈಗ ಅವನ ಸ್ವಂತ ಜಮೀನನ್ನು ಅವನು ಮಾರಟ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದರು.